ಬೆಂಗಳೂರು :
ಮೆಕ್ಕಾ ಯಾತ್ರೆಗೆ ತೆರಳಲು ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಹೈಕೋರ್ಟ್ ಅನುಮತಿ ನೀಡಿದೆ.
ಮೊಹಮ್ಮದ್ ನಲಪಾಡ್ ಕಳೆದ ವರ್ಷ ನಡೆದಿದ್ದ ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಜೈಲು ಸೇರಿದ್ದರು. ಕೋರ್ಟ್‌ನ ವ್ಯಾಪ್ತಿಯಿಂದ ಆಚೆಗೆ ಹೋಗದಂತೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡುವ ವೇಳೆ ಸೂಚನೆ ನೀಡಿತ್ತು.
ರಂಜಾನ್ ಹಿನ್ನೆಲೆಯಲ್ಲಿ ಮೆಕ್ಕಾ ಯಾತ್ರೆಗೆ ತೆರಳಲು ನಲಪಾಡ್ ಕೆಲ ದಿನಗಳ ಹಿಂದೆ ಮೆಕ್ಕಾಗೆ ತೆರಳಲು 20 ದಿನಗಳ ಅನುಮತಿ ನೀಡುವಂತೆ ಹೈಕೋರ್ಟ್ ಬಳಿ ನಲಪಾಡ್ ಕೋರಿದ್ದರು. ಆದರೆ, ಅವರಿಗೆ 13 ದಿನಗಳ ಅವಕಾಶ ನೀಡಲಾಗಿದ್ದು, ಮೇ 25 ರಿಂದ ಜೂ. 6 ರ ವರೆಗೆ ನಲಪಾಡ್ ಗೆ ಮೆಕ್ಕಾಗೆ ತೆರಳಲು ಅನುಮತಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ