2019 ರ ಸರ್ಕಾರಿ ರಜಾ ದಿನಗಳು ಹೀಗಿವೆ ನೋಡಿ..!

ಬೆಂಗಳೂರು:

      2019 ನೇ ವರ್ಷದ ಸರ್ಕಾರಿ ರಜಾದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಒಂದು ರಜೆಗೆ ಒಟ್ಟೊಟ್ಟಿಗೆ ಎರಡು ದಿನ ರಜೆಯನ್ನು ಅನುಭವಿಸುವ ಅವಕಾಶವನ್ನು ನೀಡಿದೆ.

4 ರಜೆಗಳನ್ನು ನುಂಗಿದ ಭಾನುವಾರ 

     ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ನರಕ ಚತುರ್ದಶಿ ಹಾಗೂ ಈದ್ ಮಿಲಾದ್ ಭಾನುವಾರ ಆಗಮಿಸಿವೆ.  ಇದರಿಂದ 2019ನೇ ಸಾಲಿನ ಒಟ್ಟು 25 ರಾಜ್ಯ ಸರ್ಕಾರಿ ರಜೆ ದಿನಗಳಲ್ಲಿ 4 ರಜೆ ದಿನಗಳು ಭಾನುವಾರ ಆಗಮಿಸುವ ಮೂಲಕ ಅಷ್ಟರಮಟ್ಟಿಗೆ ಸರ್ಕಾರಿ ಸೇರಿ ಇತರ ನೌಕರರಿಗೆ ನಿರಾಸೆಗೆ ಕಾರಣವಾಗಿದೆ.

      ಗಣರಾಜ್ಯೋತ್ಸವ, ಮಹಾ ಶಿವರಾತ್ರಿ, ಚಾಂದ್ರಮಾನ ಯುಗಾದಿ, ಬಕ್ರೀದ್, ಗಣೇಶ ಚತುರ್ಥಿ, ಮಹಾಲಯ ಅಮಾವಾಸ್ಯೆ ರಜೆಗಳು ಶನಿವಾರ ಅಥವಾ ಸೋಮವಾರ ಆಗಮಿಸಿದ್ದು, ಭಾನುವಾರವೂ ಸೇರಿ ಒಟ್ಟೊಟ್ಟಿಗೆ 2 ದಿನ ರಜೆ ಅನುಭವಿಸಬಹುದು.

       ಮಕರ ಸಂಕ್ರಾಂತಿ, ಗುಡ್ ಫ್ರೖೆಡೇ, ಬಸವೇಶ್ವರ ಜಯಂತಿ, ಮೊಹರಂ ಕೊನೇ ದಿನ, ದೀಪಾವಳಿ, ಕನ್ನಡ ರಾಜ್ಯೋತ್ಸವ, ಕನಕದಾಸ ಜಯಂತಿ ಶುಕ್ರವಾರ ಅಥವಾ ಮಂಗಳವಾರ ಆಗಮಿಸಿದ್ದು ನಡುವಿನ ಶನಿವಾರ ಅಥವಾ ಸೋಮವಾರ ರಜೆ ಹಾಕಿಕೊಂಡರೆ ಒಟ್ಟೊಟ್ಟಿಗೆ ಮೂರು ದಿನ ರಜೆ ಸಿಗಲಿದೆ. ಮಹಾನವಮಿ ಹಾಗೂ ವಿಜಯದಶಮಿ ಕ್ರಮವಾಗಿ ಸೋಮವಾರ ಹಾಗೂ ಮಂಗಳವಾರವಿದ್ದು, ಭಾನುವಾರವೂ ಸೇರಿ ಮೂರು ದಿನ ರಜೆಗೆ ತೆರಳಬಹುದು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap