ಹೊಸದುರ್ಗ:
ಪಟ್ಟಣದ ಜನ ಬಿಡ ಸ್ಧಳದಲ್ಲಿ ಊಟ ಮಾಡಿ ಬಿಸಾಡಿದ ಆಹಾರವನ್ನು ತಿನ್ನುಲು ಜೋಡಿ ವಿದ್ಯುತ್ ಕಂಬದ ಬಳಿ ಹೋದ ಹಸುವೊಂದು ವಿದ್ಯುತ್ ಶಾಕ್ ಹೊಡೆಸಿಕೊಂಡು ಸ್ಧಳದಲ್ಲೆ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಪಟ್ಟಣದ ಜನಬಿಡ ಪ್ರದೇಶವಾದ ಮೂರನೇ ಪ್ರಮುಖ ರಸ್ತೆಯ ದಿನ ಮಾರುಕಟ್ಟೆ ಬಳಿ ಈ ಘಟನೆ ಸಂಭವಿಸಿದ್ದು ಇಲ್ಲಿನ ಜನ ಈ ದೃಶ್ಯವನ್ನು ನೋಡಿ ನಿಬ್ಬೆರಗಾಗಿದ್ದಾರೆ ಕಾರಣ ಇದು ಪ್ರಮುಖ ರಸ್ತೆ ಇಲ್ಲಿ ದಿನ ನಿತ್ಯ ಮಾರುಕಟ್ಟೆ ನಡೆಯುತ್ತಿದೆ. ಸಾವಿರಾರು ಮಂದಿ ಇದೇ ಕಂಬದ ಮುಂದೆಯೇ ಹಾದು ಹೋಗಬೇಕು, ಶಾಲಾ ವಾಹನಗಳು ಸಂಚರಿಸುತ್ತವೆ ಶಾಲಾ ಮಕ್ಕಳು ನಿತ್ಯವೂ ಸಹಾ ಈ ಕಂಬದ ಹಾಜು ಬಾಜಿನಲ್ಲೆ ಹಾದು ಹೋಗುತ್ತಾರೆ, ಅಷ್ಟೆ ಅಲ್ಲದೇ ಈ ಪ್ರದೇಶದಲ್ಲಿರುವ ನೂರಾರು ಮನೆಯವರು ನಿತ್ಯವೂ ಸಹಾ ವಿದ್ಯುತ್ ಕಂಬದ ಪಕ್ಕದಲ್ಲಿಯೇ ಕಸ ಸೇರಿದಂತೆ ತಿಂದು ಉಳಿದ ಆಹಾರವನ್ನ ಬಿಸಾಡುತ್ತಾರೆ ಇಲ್ಲಿನ ಸುತ್ತಾ ಮುತ್ತಾ ಹೆಚ್ಚಾಗಿ ಹೋಟಲ್‍ಗಳು ಹಾಗೂ ದಿನಸಿ ಅಂಗಡಿಗಳು ಇರುವುದರಿಂದ ತ್ಯಾಜ್ಯ ವಸ್ತುಗಳನ್ನ ತಂದು ಇಲ್ಲಿಯೇ ಬಿಸಾಡುತ್ತಾರೆ.
ಅವುಗಳನ್ನು ತಿನ್ನಲು ಮೂಕ ಪ್ರಾಣಿಗಳು ಬರುತ್ತವೆ ಬೇರೆ ಸಂಧರ್ಬದಲ್ಲಿ ಯಾವ ಅಘಡಗಳು ಸಹಾ ಸಂಭವಿಸುವುದು ಕಡಿಮೆ ಆದರೆ ಕಳೆದ ನಾಲ್ಕು ದಿನಗಳಿಂದಲೂ ಸಹಾ ಪಟ್ಟಣದಲ್ಲಿ ಜಡಿ ಮಳೆ ಬರುತ್ತಿರುವುದರಿಂದ ಪಟ್ಟಣದ ಹಲವು ಕಡೆಯ ವಿದ್ಯುತ್ ಕಂಬಗಳು ಶಾಕ್‍ನಿಂದ ಕೂಡಿರುತ್ತವೆ.
ಮುಂದೆ ಇಂತಹ ಅವಘಡಗಳು ನಡೆಯದಂತೆ ಬೆಸ್ಕಾಂ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬಹು ಎಚ್ಚರಿಕೆ ವಹಿಸುವುದರ ಜೊತೆಗೆ ಬಯಲಿನಲ್ಲಿ ಹಾಗೂ ಸಾರ್ವಜನಿಕ ಸ್ಧಳಗಳಲ್ಲಿ ಇರುವ ಇಂತಹ ಟ್ಯಾನ್ಸ್‍ಫಾರಂ ಕಂಬಗಳಿಗೆ ಬೆಸ್ಕಾಂ ಇಲಾಖೆಯವರು ತಂತಿ ಬೇಲಿಯನ್ನು ಹಾಕುವಂತೆ ಅಲ್ಲದೆ ಇಂತಹ ಅಪಾಯಕಾರಿ ಸ್ಧಳಗಳಲ್ಲಿ ಸಾರ್ವಜನಿಕರು ತ್ಯಾಜ್ಯವಸ್ತುಗಳನ್ನು ಹಾಕದಂತೆ ಕಟ್ಟು ನಿಟ್ಟಿನ ಕ್ರಮವನ್ನ ಪುರಸಭೆಯವರು ಕೈಗೊಳ್ಳಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ