ಹೊಸದುರ್ಗ : ಕೆರೆ ಹೂಳೆತ್ತುವ ಕಾಮಗಾರಿಗೆ ಮಠಾಧೀಶರಿಂದ ಚಾಲನೆ!

 ಹೊಸದುರ್ಗ:

     ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದಲ್ಲಿ ಇಂದು ನಡೆದ ಕೆರೆ ಹೂಳೆತ್ತುವ ಕಾಮಗಾರಿಗೆ ಹೊಸದುರ್ಗ ತಾಲೂಕಿನ ಮಠಾಧೀಶರು ಚಾಲನೆ ನೀಡಿದ್ದಾರೆ.

      ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠದ್ಯಾಕ್ಷರಾದ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ ಮಾತನಾಡಿ, ಭಕ್ತರ ಸಂಕಷ್ಟವೇ ನಮ್ಮಗಳ ಕಷ್ಟವೆಂದು ಭಾವಿಸಿ ನಿಮ್ಮ ನೋವಲ್ಲಿ ನಾವಿದ್ದೇವೆ. ನಿಮ್ಮೊಂದಿಗೆ ನಾವು ಎಂಬ ಸಂಕಲ್ಪದೊಂದಿಗೆ ತಾಲೂಕಿನ ಹಾಗೂ ನಾಡಿನ ಕೆರೆಕಟ್ಟೆಗಳನ್ನು ಹೂಳೆತ್ತಿ ಸಂರಕ್ಷಿಸಿ ನೀರನ್ನು ಇಂಗಿಸುವ ಕೆಲಸವನ್ನು ಮಾಡಲು ಹಿಂದೆ ನಮ್ಮ ಗುರು ಹಿರಿಯರು ಮಾಡಿದ ಕೆರೆಗಳನ್ನು ಹೂಳೆತ್ತುವ ಹಾಗೂ ಸಂರಕ್ಷಿಸುವ ಸಂಕಲ್ಪವನ್ನು ಮಾಡಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿಗೊಳಿಸುವ ಕೆಲಸವನ್ನು ಕಾಯಕವೆಂದು ಭಾವಿಸಿ ಮಾಡುತ್ತಿದ್ದೇವೆ. ಇದಕ್ಕೆ ಜನಪ್ರತಿನಿಧಿಗಳ ಅಧಿಕಾರಿಗಳ ಸಹಕಾರ ಅಗತ್ಯವೆಂದು ಆಶೀರ್ವಚನ ನೀಡಿದರು.

      ಕಾಗಿನೆಲೆ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ಮಾತನಾಡುತ್ತಾ, ಹೊಸದುರ್ಗ ತಾಲೂಕಿನ ಕೆರೆಗಳ ಅಭಿವೃದ್ಧಿ ಪಡಿಸುವುದು ಹಾಗೂ ಭಕ್ತರನ್ನು ಜಾಗೃತಿ ಮಾಡಿ ಕೆರೆಗಳನ್ನು ಸಂರಕ್ಷಿಸುವ ಜೊತೆಗೆ ತಾಲೂಕನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಎಲ್ಲರೂ ಮುತುವರ್ಜಿಯಿಂದ ನಿರ್ವಹಿಸಬೇಕೆಂದು ಆಶೀರ್ವಚನ ನೀಡಿದರು.

      ಡಾ.ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡುತ್ತಾ, ಗ್ರಾಮಗಳ ಕೆರೆಗಳ ಅಭಿವೃದ್ಧಿಗೆ ಗ್ರಾಮಸ್ಥರ ಸಹಾಯ ಅಗತ್ಯ. ಗ್ರಾಮಗಳಲ್ಲಿ ನೀರಿನ ಅಭಾವವನ್ನು ತಪ್ಪಿಸಲು ಕೆರೆ ಕಟ್ಟೆಗಳನ್ನು ಹೂಳೆತ್ತಿ ರಕ್ಷಿಸುವುದು ಅಗತ್ಯವಾಗಿದೆ. ಅತ್ಯಂತ ಕಾಳಜಿಯಿಂದ ತಮ್ಮ ತಮ್ಮ ಗ್ರಾಮಗಳ ಕೆರೆಕಟ್ಟೆಗಳನ್ನು ಸಂರಕ್ಷಿಸಿ ಜೀರ್ಣೋದ್ದಾರ ಮಾಡಿ ಪ್ರಾಣಿ-ಪಕ್ಷಿಗಳಿಗೆ ನೀರು ಉಣಿಸುವ ಕೆಲಸ ಮಾಡಬೇಕಾಗಿದೆ. ಜೊತೆಗೆ ಕೊಳವೆ ಬಾವಿಗಳಿಗೆ ಅನುಕೂಲವಾಗಲಿದೆ ಎಂದು ಆಶೀರ್ವಚನ ನೀಡಿದರು.

      ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ ಗ್ರಾಮಗಳ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ.   ಈ ಕೆಲಸಕ್ಕೆ ಗ್ರಾಮದ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ತಿಳಿಸಿದರು ಎಂದು ತಿಳಿಸಿದರು.

      ಶಾಸಕರಾದ ಗೂಳಿಹಟ್ಟಿ ಡಿ ಶೇಖರ್ ನಟರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಲ್ಲವಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಮುಖಂಡರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap