ನಾನು ದೂರವಿದ್ದೆ ಎಲ್ಲವನ್ನೂ ಗಮನಿಸುತ್ತಿದ್ದೇನೆ : ಎಸ್ ಎಂ ಕೃಷ್ಣ

ಕೋಲಾರ: 

         ನನಗೆ ನನ್ನ ಕೈಯನ್ನೇ ನೋಡುವುದಕ್ಕೇ ಬರುವುದಿಲ್ಲ ಅಂದಮೇಲೆ ಬೇರೆಯವರ ಭವಿಷ್ಯ ಹೇಗೆ ಹೇಳಲು ಸಾಧ್ಯ ಎಂದು ಮಾಜಿ ಸಿಎಂ ಹಾಗು ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ.

       ಸದ್ಯ ನಾನು ರಾಜಕಾರಣದಲ್ಲಿ ಸಕ್ರಿಯವಾಗಿಲ್ಲ. ದೂರವಿದ್ದೆ ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವಂತಹ ಪ್ರಸಕ್ತ ಬೆಳವಣಿಗೆಗಳಿಂದ ನಾನು ದೂರ ಕಾಯ್ದುಕೊಂಡಿದ್ದೇನೆ . ನನಗೆ ಗೊತ್ತಿರುವುದು ಕಮಲ‌ ಮಾತ್ರ ನನಗೆ ಯಾವ ಆಪರೇಷನೂ ಗೊತ್ತಿಲ್ಲ ಎಂದು ತಿಳುಸಸಿದ್ದಾರೆ.

      ಸುಮಲತಾ ಅಂಬರೀಷ್​​​ ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ ಎಂದು ಸ್ಪಷ್ಠತೆಯಿಲ್ಲ. ಮಂಡ್ಯದ ಅಭ್ಯರ್ಥಿಯ ಆಯ್ಕೆ ಅಲ್ಲಿನ ಬಿಜೆಪಿ ಅಧ್ಯಕ್ಷರು ತೀರ್ಮಾನಿಸುತ್ತಾರೆ. ಪ್ರಧಾನಿ ಮೋದಿ ಸಮರ್ಪಕವಾದ ಬಜೆಟ್ ಕೊಟ್ಟಿದ್ದಾರೆ. ಎಲ್ಲ ವರ್ಗಗಳ‌ ಜನರಿಗೆ ಸ್ಪಂದಿಸುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap