ನವದೆಹಲಿ :
ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ಕೊರೊನಾ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ವಿಶ್ವದಾದ್ಯಂತ ಕೊರೊನಾ ಸಾವಿನ ಪ್ರಮಾಣ 4.2 ರಷ್ಟಿದ್ದರೆ, ಭಾರತದಲ್ಲಿ 2.5 ರಷ್ಟು ಮಾತ್ರ ಸಾವು ಸಂಭವಿಸುತ್ತಿವೆ. ಈ ಮೂಲಕ ವಿಶ್ವದಲ್ಲೇ ಕೊರೊನಾ ಸಾವಿನ ಪ್ರಮಾಣದಲ್ಲಿ ಕಡಿಮೆ ಸಾವು ವರದಿಯಾಗಿರುವುದು ಭಾರತದಲ್ಲಿ ಎಂದು ಆರೋಗ್ಯ ಇಲಾಖೆ ಹೇಳಿದೆ.
ವಿಶ್ವದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿನಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸಾವಿನ ಪ್ರಮಾಣ ಶೇ. 3.7 ರಷ್ಟಿದ್ದರೆ, ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ಸಾವಿನ ಪ್ರಮಾಣ 3.8 ರಷ್ಟಿದೆ.
ಆದರೆ, ಭಾರತದಲ್ಲಿ ಕೇವಲ 2.5 ರಷ್ಟಿದೆ. ಇದುವರೆಗೂ ಭಾರತದಲ್ಲಿ 11,18,043 ಜನರಿಗೆ ಕೊವಿಡ್ ತಗುಲಿದೆ. ಅದರಲ್ಲಿ 27,497 ಜನರು ಪ್ರಾಣ ಕಳೆದುಕೊಂಡಿದ್ದಾರೆ. 3,90,459 ಪ್ರಕರಣ ಪ್ರಸ್ತುತ ಸಕ್ರಿಯವಾಗಿದ್ದು, 7,00,087 ಕೇಸ್ ಚೇತರಿಕೆ ಕಂಡಿದೆ. ಪ್ರಪಂಚದ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಕೇಸ್‌ಗಳ ಪೈಕಿ ಸರಾಸರಿ ಪ್ರಮಾಣದಲ್ಲಿ ಅತಿ ಕಡಿಮೆ ಸಾವು ವರದಿಯಾಗಿರುವುದು ಭಾರತದಲ್ಲಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ