ಕುಸುಮಾ ಶಿವಳ್ಳಿ ತಾತ್ಕಾಲಿಕ ಅಭ್ಯರ್ಥಿಯೇ : ಆಡಿಯೋ ವೈರಲ್!!

 ಹುಬ್ಬಳ್ಳಿ:

      ಡಿ.ಕೆ.ಶಿವಕುಮಾರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಾನಂದ ಬೆಂತೂರ ಮನವೊಲಿಸಲು ಮುಂದಾಗಿರುವ ಆಡಿಯೋ ಕ್ಷೇತ್ರದ ವ್ಯಾಪ್ತಿಯಲ್ಲಿ ವೈರಲ್ ಆಗಿದ್ದು ಅದು ಇದೀಗ ಕುಸುಮಾ ಶಿವಳ್ಳಿ ತಾತ್ಕಾಲಿಕ ಅಭ್ಯರ್ಥಿಯೇ ಎಂಬ ಪ್ರಶ್ನೆ ತಂದೊಡ್ಡಿದೆ.

      ಡಿ.ಕೆ.ಶಿವಕುಮಾರ ಈ ಹಿಂದೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಾನಂದ ಬೆಂತೂರು ಮನವೊಲಿಕೆಗೆ ಹಲಬಾರಿ ಬಾರಿ ಪ್ರಯತ್ನ ನಡೆಸಿದ್ದಾರೆ. ಆದರೆ ಇದರಲ್ಲಿ ಅಷ್ಟಾಗಿ ಬಂಡಾಯ ಶಮನಗೊಂಡಂತೆ ಕಂಡಿಲ್ಲ. ಹೀಗಾಗಿಯೇ ಶಿವಾನಂದ ಬೆಂತೂರ ಕಾಂಗ್ರೆಸ್ ವಿರುದ್ಧ ಬಹಿರಂಗವಾಹಿಯೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದು ಎಲ್ಲರಿಗೂ ತಿಳಿದಿದೆ. ಈ ಹಿನ್ನಲೆಯಲ್ಲಿ ಡಿಕೆಶಿ ಶಿವಾನಂದ ಬೆಂತೂರ ಅವರ ಮನವೊಲಿಸಲು ಮುಂದಾಗಿ ಫೋನ್ ಕರೆ ಮಾಡಿದ್ದಾರೆ. ಅದರಲ್ಲಿ  ಬೆಂತೂರ ತಮ್ಮ ಬಂಡಾಯ ಬದಿಗೊತ್ತಿ ಕುಸುಮಾ ಶಿವಳ್ಳಿ ಪರ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಬೇಕು. ಹಾಗೆಯೇ ಮುಂದೆ ನಿಮಗೆ ಪಕ್ಷದಲ್ಲಿ ಉತ್ತಮ ಅಧಿಕಾರ ನೀಡಲಾಗುವುದು ಇದೀಗ ಚುನಾವಣೆ ಇದೆ ಹಾಗಾಗಿ ನೀವು ಹೇಳಿದಂತೆ ಮಾಡಲು ಆಗುವುದಿಲ್ಲ. ಅಷ್ಟಕ್ಕೂ ಕುಸುಮಾ ಶಿವಳ್ಳಿ ಶಾಶ್ವತ ಅಭ್ಯರ್ಥಿ ಅಲ್ಲ ಎಂಬ ಮಾತನ್ನು ಹೇಳಿದ್ದಾರೆ. ಇದರಿಂದಾಗಿ ಕುಸುಮಾ ಶಾಶ್ವತ ಅಭ್ಯರ್ಥಿ ಅಲ್ಲವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

       ಇದರ ಬಗ್ಗೆ ಕ್ಷೇತ್ರದಾದ್ಯಂತ ಆರೋಪ- ಪ್ರತ್ಯಾರೋಪಗಳು ಕೇಳಿಬರುತ್ತಿದೆ. ಒಟ್ಟಾರೆಯಾಗಿ ಉಪಚುಣಾವಣೆಯ ಮತದಾನಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಅಷ್ಟರಲ್ಲೇ ಈ ಆಡಿಯೋ ವೈರಲ್ ಆಗಿದ್ದು ಪರ – ವಿರುದ್ಧ ಚರ್ಚೆಗೆ ಕಾರಣವಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap