ಬಾಗಲಕೋಟೆ:
ಮಂತ್ರಿ, ಅಧಿಕಾರ, ಹೆಲಿಕಾಪ್ಟರ್ ಇವೆಲ್ಲವೂ ನನ್ನ ಜೀವನದ ಮೊದಲ ಹಂತ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬಾಗಲಕೋಟೆಯ ಸಂಗಮ ಕ್ರಾಸ್ನಲ್ಲಿ ನಡೆಯುತ್ತಿರುವ ರೆಡ್ಡಿ ಸಮುದಾಯದ ಸಮಾರಂಭದಲ್ಲಿ ಮಾತನಾಡಿದ ಗಾಲಿ ಜನಾರ್ದನ ರೆಡ್ಡಿ, ನನ್ನ ಜೀವನವನ್ನು ಎರಡು ಭಾಗವಾಗಿ ನೋಡುತ್ತೇನೆ. ಮಂತ್ರಿ, ಅಧಿಕಾರ, ಹೆಲಿಕಾಪ್ಟರ್ ಮೊದಲ ಹಂತದ ಜೀವನ. ರೆಡ್ಡಿ ಸಮಾಜದ ಜನರೊಂದಿಗಿನ ಜೀವನ ಎರಡನೇ ಹಂತದ ಜೀವನ ಆಗಿದೆ ಎಂದು ತಮ್ಮ ಹಿಂದಿನ ರಾಜಕೀಯ ಜೀವನವನ್ನು ಸ್ಮರಿಸಿದರು.
ವೇಮನರಿಗೆ ಮತ್ತು ಬೆನಕಟ್ಟಿ ಗ್ರಾಮಸ್ಥರಿಗೆ ಗೌರವ ಸಲ್ಲಿಸಲು ಜನಾರ್ದನ ರೆಡ್ಡಿ ಅವರು 9 ಕಿ.ಮೀ.ಪಾದಯಾತ್ರೆ ಮಾಡಿದರು. ಬಳಿಕ ಮಾತನಾಡಿದ ಅವರು, ಕಷ್ಟದ ದಿನಗಳಿಂದ ಹೊರ ಬಂದ ನಂತರ 3 ವಷ೯ಗಳಿಂದ ಬೆನಕಟ್ಟಿಗೆ ಬರಲಾಗಲಿಲ್ಲ. 50 ವಷ೯ಗಳಿಂದ ರಥೋತ್ಸವ ನಡೆಯುತ್ತಿದೆ. ವೇಮನ ಹಾಗೂ ಬೆನಕಟ್ಟಿ ಗ್ರಾಮಸ್ಥರಿಗೆ ಗೌರವ ಸಲ್ಲಿಸಲು ಪಾದಯಾತ್ರೆ ಮಾಡಿದೆ. 2008 ರಲ್ಲಿ ಯಡಿಯೂರಪ್ಪ ಸಕಾ೯ರ ರಚನೆ ಮಾಡುವಾಗಲೂ ಒಬ್ಬ ರೆಡ್ಡಿಯಾಗಿ ಕೆಲಸ ಮಾಡಿದ್ದೇನೆ. ಪಾದಯಾತ್ರೆ ಮಾಡಿದ್ದು ರಾಜಕೀಯ ಉದ್ದೇಶಕ್ಕಲ್ಲ. ವೇಮನ್ ಮೇಲೆ ಆಣೆ ಮಾಡ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ