ಬೆಂಗಳೂರು :
ಉಪ ಚುನಾವಣೆಗೆ ಎಲ್ಲರಿಗಿಂತ ಮೊದಲು ಅಭ್ಯರ್ಥಿಗಳ ಆಯ್ಕೆಗೆ ಇಳಿದಿರುವ ಕಾಂಗ್ರೆಸ್ 10 ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಅಂತಿಮಗೊಳಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿಗಳಾದ @kcvenugopalmp ಅವರ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ @dineshgrao, ಶಾಸಕಾಂಗ ಪಕ್ಷದ ನಾಯಕರಾದ @siddaramaiah, ಕೆಪಿಸಿಸಿ ಕಾರ್ಯಾಧ್ಯಕ್ಷರಾದ @eshwar_khandre ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರುಗಳು ಉಪಸ್ಥಿತರಿದ್ದರು. pic.twitter.com/HPT8mcxgBk
— Karnataka Congress (@INCKarnataka) September 26, 2019
ಇಂದು ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ಕೆಪಿಸಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ 10 ಕ್ಷೇತ್ರಗಳು ಮತ್ತು ಆ ಕ್ಷೇತ್ರಗಳ ಸ್ಪರ್ಧಾಳುಗಳ ಪಟ್ಟಿ ಇಲ್ಲಿದೆ.
- ಹೊಸಕೋಟೆ- ಪದ್ಮಾವತಿ ಸುರೇಶ್
- ಕೆ.ಆರ್.ಪುರಂ- ನಾರಾಯಣಸ್ವಾಮಿ
- ಕೆ.ಆರ್.ಪೇಟೆ- ಕೆ.ಬಿ ಚಂದ್ರಶೇಖರ
- ಹುಣಸೂರು- ಹೆಚ್.ಬಿ.ಮಂಜುನಾಥ್
- ಗೋಕಾಕ್- ಲಕನ್ ಜಾರಕಿಹೋಳಿ
- ಕಾಗವಾಡ-ಪ್ರಕಾಶ್ ಹುಕ್ಕೇರಿ
- ರಾಣಿಬೆನ್ನೂರು- ಕೆ.ಬಿ.ಕೋಳಿವಾಡ
- ಹೊಸಪೇಟೆ- ಸೂರ್ಯ ನಾರಾಯಣ ರೆಡ್ಡಿ
- ಹಿರೆಕೇರೂರು- ಬನ್ನಿಕೋಡ್
- ಮಹಲಕ್ಷ್ಮಿ ಲೇಔಟ್- ಶಿವರಾಜು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ