ನವದೆಹಲಿ:
ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ಸೋಮವಾರ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಅನರ್ಹ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಹೂಡಿದ್ದ ಅರ್ಜಿಯ ವಿಚಾರಣೆ ಇಂದು ನಡೆಸಿದ ಎನ್.ವಿ ರಮಣ ಅವರ ನೇತ್ವದ ತ್ರಿಸದ್ಯಸ ಪೀಠ ವಿಚಾರಣೆಯನ್ನು ನಡೆಸಿ ನಾಳೆಗೆ ಮುಂದೂಡಿದೆ.
17 ಅನರ್ಹ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದರು. ಅನರ್ಹ ಶಾಸಕರ ಪರವಾಗಿ ವಕೀಲ ಮುಕುಲ್ ರೊಹ್ಟಗಿ ಅವರು ವಾದ ಮಂಡಿಸಿದ್ದಾರೆ.
ಸ್ಪೀಕರ್ ಅವರ ಅನರ್ಹತೆಯ ಆದೇಶವು ದುರುದ್ದೇಶದಿಂದ ಕೂಡಿದ್ದು, ಪಕ್ಷ ನಿಷ್ಠರಾಗಿ ಅವರು ಅನರ್ಹರನ್ನಾಗಿ ಮಾಡಿದ್ದಾರೆ. ಹಾಗಗಿ ಅನರ್ಹತೆಯನ್ನು ರದ್ದು ಮಾಡಬೇಕು ಎಂದು ಮುಕುಲ್ ರೊಹ್ಟಗಿ ವಾದ ಮಂಡಿಸಿದ್ದಾರೆ.
ಎರಡು ಗಂಟೆಗಳಷ್ಟು ಸುದೀರ್ಘವಾಗಿ ವಾದ ಮಂಡನೆ ಆಗುದ್ದು, ಉಪಚುನಾವಣೆಯನ್ನು ಮುಂದೂಡಬೇಕು ಅಥವಾ ಚುನಾವಣೆಗೆ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ನೀಡಬೇಕು ಎಂದು ಮುಕುಲ್ ರೊಹ್ಟಗಿ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಮುಂದೆ ವಾದವಿಟ್ಟಿದ್ದಾರೆ.
ಇಂದು ಅನರ್ಹ ಶಾಸಕರ ಪರ ನಡೆದ ವಾದ ಬಳಿಕ ಕಾಂಗ್ರೆಸ್ ಪರ ವಕೀಲರು ನಾಳೆ ಪ್ರತಿವಾದವನ್ನು ಸಲ್ಲಿಸುತ್ತೇವೆ ಎಂದು ಹೇಳಿದರು. ಹೀಗಾಗಿ ನಾಳೆಗೆ ವಿಚಾರರಣೆಯನ್ನು ನ್ಯಾಯಾಪೀಠ ಮುಂದೂಡಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ