ಬೆಂಗಳೂರು :
ರಾತ್ರಿ ವೇಳೆ ಕರ್ಫ್ಯೂ ಇದ್ದಾಗಲೂ ಬಸ್,ಆಟೋ, ಕ್ಯಾಬ್ ಓಡಾಟಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.
ಕೊರೊನಾ ವೈರಸ್ ದೇಶಾದ್ಯಂತ ಹಬ್ಬುತ್ತಿದ್ದಂತೆ ಲಾಕ್‌ಡೌನ್ ಜಾರಿಮಾಡಲಾಗಿತ್ತು. ಸಂಜೆ 7 ಗಂಟೆಯ ಬಳಿಕ ಬಸ್ ಆಗಲಿ, ಕ್ಯಾಬ್ ಆಗಲಿ, ಸ್ವಂತ ವಾಹನಗಳಲ್ಲಿಯೂ ಸಂಚರಿಸುವಂತಿರಲಿಲ್ಲ, ಭಾನುವಾರ ಕೂಡ ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಇನ್ಯಾವ ಕೆಲಸಗಳಿಗೂ ತೆರಳುವಂತಿರಲಿಲ್ಲ.
ಆದರೆ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಕರ್ಫ್ಯೂ ಸಂದರ್ಭದಲ್ಲಿ ಅಂದರೆ, ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕೂಡ ಬಸ್, ಕ್ಯಾಬ್, ಆಟೋಗಳು ಸಂಚರಿಸಬಹುದು ಎಂದು ತಿಳಿಸಿದೆ.
ಬಸ್ ಟಿಕೆಟ್ ಆಧಾರದ ಮೇಲೆ ಬಸ್ ನಿಲ್ದಾಣಗಳಿಂದ ಮನೆಗಳಿಗೆ ತೆರಳಲು ಅನುಮತಿ ನೀಡಲಾಗಿದೆ. ಇದರೊಂದಿಗೆ ನೈಟ್ ಕರ್ಫ್ಯೂ ತೆರವುಗೊಂಡು ದಿನದ 24 ಗಂಟೆಯೂ ಸಂಚಾರಕ್ಕೆ ಅನುಮತಿ ಸಿಕ್ಕಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ