₹1 ಕೋಟಿಗೆ ‘ಎರಡು ತಲೆ ಹಾವು’ ಮಾರಾಟ ; ಆರೋಪಿ ಅಂದರ್​!!

ಕೊಡಗು: 

     ಎರಡು ತಲೆ ಹಾವನ್ನು ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಯತ್ನಿಸುತ್ತಿದ್ದ ಯತ್ನಿಸಿದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

      ಬಂಧಿತನನ್ನು ಮೈಸೂರಿನ ಶಾಂತಿನಗರದ ಸೈಯದ್ ಮೊಮಿನ್(22) ಎಂದು ಗುರುತಿಸಲಾಗಿದೆ. ಕಡುನೀಲಿ ಮತ್ತು ಹಳದಿ ಬಣ್ಣದ ಏರ್ ಬ್ಯಾಗಿನಲ್ಲಿ ಹಾವನ್ನು ತುಂಬಿಕೊಂಡು ತಂದಿದ್ದ. ಆನಂದಪುರ ಬಸ್​ ನಿಲ್ದಾಣದ ಸಮೀಪ ಈ ಬ್ಯಾಗನ್ನು ಹಿಡಿದುಕೊಂಡು ಗಿರಾಕಿಗಾಗಿ ಕಾಯುತ್ತಿದ್ದ. ಒಂದು ಕೋಟಿ ರೂಪಾಯಿ ಬೆಲೆಗೆ ಹಾವನ್ನು ಮಾರಾಟ ಮಾಡಲು ಮುಂದಾಗಿದ್ದ ಆತ.

      ಹಾವು ಮಾರಾಟ ಮಾಡುವುದಕ್ಕೆ ಪ್ರಯತ್ನಿಸುತ್ತಿರುವ ಖಚಿತ ಮಾಹಿತಿ ಸಿಕ್ಕ ಕಾರಣ, ಅರಣ್ಯ ಸಂಚಾರಿ ದಳದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಸೈಯದ್ ಬಳಿ ತೆರಳಿ ಹಾವು ಬ್ಯಾಗ್​ನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಆತನನ್ನು ಬಂಧಿಸಿದ್ದಾರೆ. ಅಲ್ಲದೆ, ಆತನ ಬಳಿ ಇದ್ದ ಹಾವನ್ನು ರಕ್ಷಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ