ಮಹಾರಾಷ್ಟ್ರ : ಮಾಜಿ ಡಿಜಿಪಿ ವಿರುದ್ದ FIR ದಾಖಲು …!

ಥಾಣೆ:

   ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಂಜಯ್ ಪಾಂಡೆ ಮತ್ತು ಇತರ 6 ಜನರ ವಿರುದ್ಧ ಥಾಣೆ ನಗರದಲ್ಲಿ ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

   ಹಿಂದಿನ ಮಹಾ ವಿಕಾಸ್ ಆಘಾಡಿ ಸರ್ಕಾರದ ಅವಧಿಯಲ್ಲಿ ಡಿಜಿಪಿಯಾಗಿದ್ದ ಪಾಂಡೆ ಸೇರಿದಂತೆ ಏಳು ಜನರ ವಿರುದ್ಧ ಮುಂಬೈನ ಉದ್ಯಮಿ ಸಂಜಯ್ ಪುನಾಮಿಯಾ ಸೋಮವಾರ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ನೀಡಿದ ನಂತರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ.

    ಮೇ 2021 ಮತ್ತು ಜೂನ್ 30, 2024 ರ ನಡುವೆ ಆರೋಪಿಗಳಿಂದ ಸಾಕಷ್ಟು ತೊಂದರೆ ಎದುರಿಸಿರುವುದಾಗಿ ಪುನಾಮಿಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇವರಲ್ಲದೇ ಮಾಜಿ ಎಸಿಪಿ ಸರ್ದಾರ್ ಪಾಟೀಲ್, ಇನ್ಸ್‌ಪೆಕ್ಟರ್ ಮನೋಹರ್ ಪಾಟೀಲ್, ವಕೀಲ ಶೇಖರ್ ಜಗತಾಪ್, ಬಿಲ್ಡರ್ ಶ್ಯಾಮಸುಂದರ್ ಅಗ್ರವಾ, ಮತ್ತಿಬ್ಬರು ಆರೋಪಿಗಳಾಗಿದ್ದಾರೆ. 

Recent Articles

spot_img

Related Stories

Share via
Copy link
Powered by Social Snap