ಕೊಟ್ಟೂರು :
ಆಟೋಗಳ ಚಾಲಕರು ಡಿ.ಎಲ್. ಎಫ್.ಸಿ, ಇನ್ಸುರೇನ್ಸ ಸೇರಿದಂತೆ ಇತರೆ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಕಡ್ಡಾಯವಾಗಿ ಯೂನಿಪಾರಂ ಧರಿಸಿರಬೇಕು. ಅಗತ್ಯಕ್ಕಿಂತಲೂ ಹೆಚ್ಚಿನ ಜನರನ್ನು ಹತ್ತಿಸಿಕೊಂಡು ಪ್ರಯಾಣಿಸಬಾರದು ಎಂದು ಪಿ.ಎಸ್.ಐ ಎ. ಕಾಳಿಂಗ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸಂಜೆ ಉಜ್ಜಿನಿ ಸರ್ಕಲ್ ಆಟೋ ನಿಲ್ದಾಣ ಮತ್ತು ಸರ್ಕಾರಿ ಬಸ್ ಆಟೋ ನಿಲ್ದಾಣಕ್ಕೆ ತೆರಳಿ ಆಟೋ ಚಾಲಕರ ಸಭೆ ಕರೆದು ಚಾಲಕರು ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರು.
ಪಟ್ಟಣದ ಸರಕು ಸಾಗಾಣಿಕೆ ಅಪ್ಪೆಗಾಡಿಗಳ ನಿಲ್ದಾಣದಲ್ಲಿ ಚಾಲಕರ ಸಭೆ ಕರೆದು ಯಾವುದೇ ಕಾರಣಕ್ಕೂ ಸರಕು ಹೊರತು ಪಡಿಸಿ, ಜನರನ್ನು ಕೂಡಿಸಿಕೊಂಡು ಪ್ರಯಾಣಿಸಬಾರದು. ಕೇವಲ ಸರಕುಗಳನ್ನು ಮಾತ್ರ ಸಾಗಿಸಬೇಕು ಎಂದು ತಿಳಿಸಿದರು.
ಆಟೋ ಮತ್ತು ಸರಕು ಸಾಗಾಣಿಕೆ ವಾಹನಗಳ ಚಾಲಕರಿಗೆ ದಾಖಲೆಗಳು ಇಲ್ಲದವರು ಒಂದು ವಾರದೊಳಗೆ ಸಿದ್ದಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಾರದೊಳಗೆ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದರು.
ಕಡ್ಡಾಯವಾಗಿ ದ್ವಿಚಕ್ರವಾಹನ ಚಾಲಕರು ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಇಲ್ಲದಿದ್ದರೆ ಆಗುವ ಪರಿಣಾಮ ನಿಮಗೆಲ್ಲ ಗೊತ್ತಿದೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಇನ್ನೂ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆತರುವ ಆಟೋದವರು ನಾಲ್ಕು ಇಲ್ಲವೆ ಐದು ವಿದ್ಯಾರ್ಥಿಗಳಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆತರುವಂತ್ತಿಲ್ಲ. ಅಗತ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳನ್ನು ಆಟೋದಲ್ಲಿ ಕರೆತಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿ.ಎಸ್.ಐ ಎ.ಕಾಳಿಂಗ ಅವರೊಂದಿಗೆ ಎಎಸ್‍ಐ ಗಂಗಾಧರಪ್ಪ, ಪೊಲೀಸ್ ಮಂಜಣ್ಣ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ