ಬೆಂಗಳೂರು :
3 ರಿಂದ 4 ದಿನಗಳಲ್ಲಿ ಸಾರಿಗೆ ನೌಕರರ ಸಂಬಳವನ್ನು ನೌಕರರ ಖಾತೆಗೆ ಜಮೆ ಮಾಡಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಾರಿಗೆ ನೌಕರರು ಆತಂಕಕ್ಕೆ ಒಳಗಾಗಬೇಡಿ. ಮುಖ್ಯಮಂತ್ರಿಗಳೊಂದಿಗೆ ಸಾರಿಗೆ ನೌಕರರ ಸಂಬಳ ನೀಡುವ ಬಗ್ಗೆ ಮಾತನಾಡಲಾಗುತ್ತದೆ. ಅವರೊಂದಿಗೆ ಮಾತುಕತೆ ನಡೆಸಿ, ಸಾರಿಗೆ ನೌಕರರ ಸಂಬಳವನ್ನು 3-4 ದಿನಗಳಲ್ಲಿ ಖಾತೆಗೆ ಜಮೆ ಮಾಡಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಕೋವಿಡ್-19 ನಿಯಂತ್ರಣದ ಸಂಬಂಧ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮೇ.17ರವರೆಗೆ ಲಾಕ್ ಡೌನ್ ಕೂಡ ಮುಂದುವರೆಯಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸಾರಿಗೆ ನೌಕರರ ವೇತನವನ್ನು ರಾಜ್ಯ ಸರ್ಕಾರ ನೌಕರರ ಖಾತೆಗೆ ಜಮೆ ಮಾಡಿರಲಿಲ್ಲ. ಹೀಗಾಗಿ ಲಾಕ್ ಡೌನ್ ಆರ್ಥಿಕ ಸಂಕಷ್ಟದಿಂದಾಗಿ ಸಾರಿಗೆ ನೌಕರರ ಸಂಬಳಕ್ಕೂ ಸರ್ಕಾರ ಕತ್ತರಿ ಹಾಕಿತಾ ಎಂಬ ಆತಂಕದಲ್ಲಿದ್ದರು.
ಇದೀಗ 3 ರಿಂದ 4 ದಿನಗಳಲ್ಲಿ ಸಂಬಳವನ್ನು ನೌಕರರ ಖಾತೆಗೆ ಜಮೆ ಮಾಡಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದ್ದು ಈ ಮೂಲಕ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ