ಬೆಂಗಳೂರು :
ಖಾಲಿ ಉಳಿದಿರುವ ಒಂದು ಎಂಎಲ್ ಸಿ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದ್ದು, ಆರ್. ಶಂಕರ್ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ನಡುವೆ ಪರಿಷತ್ ಸ್ಥಾನಕ್ಕಾಗಿ ಬಿಗ್ ಫೈಟ್ ಶುರುವಾಗಿದೆ.
ಫೆಬ್ರವರಿ 20 ಕ್ಕೆ ಲಕ್ಷ್ಮಣ್ ಸವದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ 6 ತಿಂಗಳಾಗುತ್ತದೆ. ಸಚಿವರು 6 ತಿಂಗಳೊಳಗೆ ಪರಿಷತ್ ಗೆ ಆಯ್ಕೆಯಾಗಬೇಕು. ಕಾಂಗ್ರೆಸ್ ಪರಿಷತ್ ಸದಸ್ಯ ರಿಜ್ವಾನ್ ಅರ್ಷಾದ್ ರಿಂದ ತೆರವಾಗುವ ಸ್ಥಾನಕ್ಕೆ ಸದ್ಯ ಆರ್. ಶಂಕರ್ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ನಡುವೆ ಬಿಗ್ ಫೈಟ್ ಎದುರಾಗಿದೆ.
ಡಿಸಿಎಂ ಲಕ್ಷ್ಮಣ ಸವದಿ ಅವರ ಮೇಲೆ ವಿಪರೀತ ಒತ್ತಡವಿದೆ. ಆರು ತಿಂಗಳೊಳಗೆ ಅವರು ಶಾಸಕರಾಗಬೇಕಿದೆ. ಸದ್ಯಕ್ಕೆ ಒಂದೇ ಎಂಎಲ್ಸಿ ಸ್ಥಾನ ಖಾಲಿ ಉಳಿದಿದೆ. ಯಡಿಯೂರಪ್ಪ ಈ ಸ್ಥಾನವನ್ನು ಸವದಿಗೆ ಕೊಡುವ ಇರಾದೆಯಲ್ಲಿದ್ದಾರೆ. ಆದರೆ, ರಾಣೆಬೆನ್ನೂರಿನ ಮಾಜಿ ಪಕ್ಷೇತರ ಶಾಸಕ ಆರ್. ಶಂಕರ್ ಅವರು ತಮಗೆ ಈ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಆರ್.ಶಂಕರ್ ಅವರು ರಾಣೆಬೆನ್ನೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಚುನಾವಣೆ ಬಳಿಕ ಎಂಎಲ್ ಸಿ ಸ್ಥಾನ ನೀಡುವ ಭರವಸೆಯೊಂದಿಗೆ ಸಚಿವರಾಗುವ ನಿರೀಕ್ಷೆಯಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ