ಅಪರಿಚಿತ ವಾಹನ ಡಿಕ್ಕಿ : ಚಿರತೆ ಮರಿ ಸಾವು!!!

ಚಿಕ್ಕಮಗಳೂರು:

      ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಿಳಗುಳ ಬಳಿಯ ಕೊಲ್ಲಿಬೈಲು ಗ್ರಾಮದಲ್ಲಿ ನಡೆದಿದೆ.

       ಚಿರತೆ ರಾತ್ರಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯೊಡೆದು ಸ್ಥಳದಲ್ಲೇ ಸಾವನ್ನಪ್ಪಿದೆ. ನಿನ್ನೆಯಷ್ಟೇ ಬಿಳಗುಳ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಡಿಎಫ್ ಒ ಮನೆ ಮುಂದೆ ಹಾಗೂ ವಿಜಯ ಬ್ಯಾಂಕ್ ಮುಂಭಾಗ ಚಿರತೆ ಓಡಾಡಿದ್ದು, ಅದರ ಹೆಜ್ಜೆ ಗುರುತುಗಳು ಪತ್ತೆ ಆಗಿದ್ದವು. ಈಗ ಅಪಘಾತದಲ್ಲಿ ಸಾವನ್ನಪ್ಪಿರುವ ಚಿರತೆ ಅದೇ ಆಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

      ಮೃತ ದೇಹವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಗ್ರಾಮಕ್ಕೆ ನುಗ್ಗಿದ ಚಿರತೆ ಮರಿ ಇದೆ ಆಗಿತ್ತು ಎಂದು ಖಚಿತ ಪಡಿಸಿದ್ದಾರೆ. 

      ಕಾಡಿನಲ್ಲಿ ಹಾದು ಹೋಗುವ ರಸ್ತೆ, ಹೆದ್ದಾರಿ ರಸ್ತೆಗಳಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಆದರೂ ಸಹ ಇದಕ್ಕೆ ಕಡಿವಾಣ ಇಲ್ಲದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ