ಲಖನ್:
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕೀರ್ ರೆಹಮನ್ ಲಖ್ವಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಶುಕ್ರವಾರ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
2015ರಿಂದ ಜಾಮೀನಿನ ಮೇಲೆ ಇದ್ದ ಲಖ್ವಿಯನ್ನು ಪಂಜಾಬ್ ಪ್ರಾಂತ್ಯದ ಉಗ್ರ ನಿಗ್ರಹ ಇಲಾಖೆ ವಶಕ್ಕೆ ಪಡೆದಿತ್ತು. 2008ರಲ್ಲಿ ಮುಂಬೈ ಮೇಲೆ ನಡೆದ ಉಗ್ರ ದಾಳಿಯ ನಂತರ ಲಖ್ವಿಯನ್ನು ಜಾಗತಿಕ ಉಗ್ರ ಎಂದು ಘೋಷಿಸಲಾಗಿತ್ತು. 2008ರಂದು ನಡೆದಿದ್ದ ಈ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಐದು ವರ್ಷಗಳ ಹಿಂದೆ ಬಂಧಿತನಾಗಿದ್ದ ಲಖ್ವಿ ಜಾಮೀನಿನ ಮೇಲೆ ಹೊರ ಬಂದಿದ್ದ.
ಭಯೋತ್ಪಾದನೆ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ ಲಖ್ವಿಯನ್ನು ಲಾಹೋರ್ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪೊಲೀಸರು ಜನವರಿ 2 ರಂದು ಬಂಧಿಸಿದ್ದರು.
ಪ್ಯಾರೀಸ್ನ ಆರ್ಥಿಕ ಭಯೋತ್ಪಾದಕರ ನಿಗ್ರಹ ದಳದ ಕಪ್ಪುಪಟ್ಟಿಯಲ್ಲಿ ಹಫೀಜ್ ಸಯೀದ್, ಮಸೂದ್ ಅಜರ್ ಜತೆಗೆ ಲಖ್ವಿ ಹೆಸರು ಇತ್ತು. ಕಳೆದ ವರ್ಷ ಸಯೀದ್ ನಾಲ್ಕು ಪ್ರಕರಣಗಳಲ್ಲಿ 36 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಲಖ್ವಿಗೆ 15 ವರ್ಷ ಶಿಕ್ಷೆಯಾಗುವ ಮೂಲಕ ಅಧಿಕ ಅವಧಿ ಜೈಲುಶಿಕ್ಷೆ ಸಿಕ್ಕಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ