ಬಳ್ಳಾರಿ:
ಶಾಲೆಯ ಮಧ್ಯಾನದ ಬಿಸಿಯೂಟದಲ್ಲಿ ಹಲ್ಲಿಯೊಂದು ಪತ್ತೆಯಾಗಿ 85 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಸುದ್ಧಿ ವರದಿಯಾಗಿದೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮದ ಪ್ರೌಢಶಾಲೆಯಲ್ಲಿ ಬುಧವಾರ ಬಡಿಸಿದ ಮಧ್ಯಾಹ್ನದ ಬಿಸಿಯೂಟವಾದ ಪಲಾವು ಇದ್ದ ತಟ್ಟೆಯಲ್ಲಿ ಮೊದಲಿಗೆ ಹಲ್ಲಿ ಕಾಣಿಸಿಕೊಂಡಿದೆ. ಶಾಲೆಯ 9ನೇ ತರಗತಿ ವಿದ್ಯಾರ್ಥಿ ನಂದಿಪುರ ಶಶಿಧರ ಪಲಾವು ಸೇವಿಸುತ್ತಿದ್ದ ವೇಳೆ ಹಲ್ಲಿ ಕಂಡಿದ್ದಾನೆ. ತಿನ್ನುವುದನ್ನು ಅರ್ಧದಲ್ಲೇ ಬಿಟ್ಟು, ಶಿಕ್ಷ ಕರ ಗಮನಕ್ಕೆ ತಂದಿದ್ದಾನೆ. ಈ ವೇಳೆಗಾಗಲೇ ಶಾಲೆಯ 127 ವಿದ್ಯಾರ್ಥಿಗಳ ಪೈಕಿ ಹಲವರು ಬಿಸಿಯೂಟ ಸೇವಿಸಿದ್ದರು. ಮುಂಜಾಗ್ರತಾ ಕ್ರಮವಾಗಿ 87 ವಿದ್ಯಾರ್ಥಿಗಳನ್ನು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಗಳಿಗೆ ತಕ್ಷ ಣವೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಶಾಲೆಯ 7 ವಿದ್ಯಾರ್ಥಿಗಳಿಗೆ ವಾಂತಿ ಕಾಣಿಸಿಕೊಂಡಿತು. ಮುಂಜಾಗ್ರತೆ ಕ್ರಮವಾಗಿ ಶಾಲೆಯ 87 ವಿದ್ಯಾರ್ಥಿಗಳಿಗೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬಹುತೇಕ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದರು.
”ಘಟನೆಯಲ್ಲಿ ಮೂವರು ಮಕ್ಕಳಲ್ಲಿ ಮಾತ್ರ ಅಲ್ಪ ಪ್ರಮಾಣದ ವಾಂತಿ ಕಾಣಿಸಿಕೊಂಡಿದೆ. ಈಗಾಗಲೇ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ. ಉಳಿದಂತೆ 44 ಬಾಲಕರು ಹಾಗೂ 43 ಬಾಲಕಿಯರಿಗೆ ಮುಂಜಾಗ್ರತೆ ಕ್ರಮವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ಶಂಕರನಾಯ್ಕ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ