ಮಂಗಳೂರು : ದಾಖಲೆಯಿಲ್ಲದ 5,48,000 ರೂ. ವಿದೇಶಿ ಕರೆನ್ಸಿ ಪತ್ತೆ!!

ಮಂಗಳೂರು :

     ದಾಖಲೆಯಿಲ್ಲದ 5,48,000 ರೂಪಾಯಿಯ ವಿದೇಶಿ ಕರೆನ್ಸಿಗಳು ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

     ಇಂದು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳೂರಿನಿಂದ ದುಬೈಗೆ ಪ್ರಯಾಣಿಸಬೇಕಿದ್ದ ಶಾಹುಲ್ ಹಮೀದ್ ನನ್ನು ಅನುಮಾನಾಸ್ಪದವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಅಧಿಕಾರಿಗಳು ವಿದೇಶಿ ಕರೆನ್ಸಿ ಪತ್ತೆ ಮಾಡಿದ್ದು, ಈ ಸಂಬಂಧ ಆರೋಪಿ ಶಾಹುಲ್ ಹಮೀದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

     ಅಲ್ಲದೇ  5,48,000 ಸಾವಿರ ರೂ. ಮೌಲ್ಯದ ಯುಎಸ್ ಡಾಲರ್ (76×100), ಚೀನೀ ಕರೆನ್ಸಿ (1000×10 ಮತ್ತು 110×10), ಮಲೇಷ್ಯಾ ಕರೆನ್ಸಿ (50×1, 10×01 ಮತ್ತು 1×3), ಟರ್ಕಿ ಕರೆನ್ಸಿ (10×2) ಯನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ