ಚಿಕ್ಕಬಳ್ಳಾಪುರ:
ವಿಶ್ವ ಪ್ರಸಿದ್ದ ಪ್ರವಾಸಿ ತಾಣ ನಂದಿಗಿರಿಧಾಮದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡು ಸುಮಾರು 80 ಎಕರೆಯಷ್ಟು ನಂದಿಬೆಟ್ಟದ ಅರಣ್ಯ ಪ್ರದೇಶ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ನಂದಿಗಿರಿಧಾಮದ ತಪ್ಪಲಿನ ಸುಲ್ತಾನಪೇಟೆಯ ಮಾರ್ಗದ ಕಡೆಯಿಂದ ಟಿಪ್ಪು ಬೇಸಿಗೆ ಆರಮನೆಯ ಹಿಂಭಾಗದವರೆಗೂ ಬೆಂಕಿ ಹೊತ್ತಿಕೊಂಡಿದ್ದು, ಬೆಟ್ಟದ ಮೇಲಿನ ಕೋಟೆಯ ಕಾಲ್ನಡಿಗೆ ಮಾರ್ಗದ ಸುತ್ತ ಮುತ್ತಲೂ ಸಂಪೂರ್ಣ ಬೆಂಕಿ ಆವರಿಸಿದೆ. ನೋಡ ನೋಡುತ್ತಲೇ ಬಿಸಲಿನ ತಾಪಕ್ಕೆ ಬಳಲಿ ಬೆಂಡಾಗಿ ಉದುರಿದ್ದ ತರಗಲೆಗೆಳ ಮುಖಾಂತರ ಬೆಂಕಿ ಮತ್ತಷ್ಟು ಹಬ್ಬಿದ್ದು ಇಡೀ ಬೆಟ್ಟದ ಸುತ್ತಲೂ ಆವರಿಸಿ ಆತಂಕ ಮನೆ ಮಾಡಿದೆ.
ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ನಂಧಿಗಿರಿಧಾಮದ ಸಿಬ್ಬಂದಿ ಸಾಕಷ್ಟು ಹರಸಾಹಸ ಪಟ್ಟು ಬೆಂಕಿ ನಂದಿಸಲು ಪ್ರಯತ್ನಿಸಲು ಯತ್ನಿಸಿದರಾದರೂ ಸಿಬ್ಬಂದಿಯ ಪ್ರಯತ್ನ ಫಲಪ್ರದವಾಗಿಲ್ಲ, ಆದರೂ ಬೆಂಕಿ ಬೆಟ್ಟದ ಮೇಲೆ ತಾಗದಂತೆ ಗಂಟೆಗಟ್ಟಲೇ ಹರಸಾಹಸಪಟ್ಟು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ನಂದಿಬೆಟ್ಟ ಸಾಕಷ್ಟು ಎತ್ತರ ಹಾಗೂ ವಿಶಾಲವಾಗಿದ್ದು, ನಂದಿಬೆಟ್ಟದ ತಪ್ಪಲಿನ ಜಾಗ ಯಾರೂ ಹೋಗಲಾಗದಷ್ಟು ಕಲ್ಲು ಮುಳ್ಳುಗಳ ದಾರಿಯಿಂದ ಕೂಡಿದೆ.
ಹೀಗಾಗಿ ಬೆಟ್ಟದ ಸುತ್ತಮುತ್ತಲೂ ಹೊತ್ತಿಕೊಂಡಿರೋ ಜಾಗಕ್ಕೆ ಆಗ್ನಿಶಾಮಕ ವಾಹನವಾನ ಸೇರಿದಂತೆ ಇನ್ನಿತರರು ಯಾರೂ ಸಹ ಹೋಗಲು ಸಾಧ್ಯವಾಗದ ಕಾರಣ ನೋಡು ನೋಡುತ್ತಲೇ ಬೆಂಕಿ ಮುಗಿಲೆತ್ತರಕ್ಕೆ ಆವರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ