ಮೈಸೂರು:
ಮೈಸೂರು ಪಾಲಿಕೆ ಗ್ರಾಹಕರೋಬ್ಬರಿಗೆ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ 70 ಪೈಸೆ ಶುಲ್ಕ ವಿಧಿಸಿದ್ದರಿಂದ ಈಗ ಆ ಗ್ರಾಹಕರಿಗೆ 1500 ರೂ. ಪರಿಹಾರ ನೀಡುವಂತಾಗಿದೆ.ಮೈಸೂರು ಮಹಾನಗರ ಪಾಲಿಕೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
ಹಿನ್ನೆಲೆ:
ಈ ಸಂಬಂಧ ರಾಮಕೃಷ್ಣ ನಗರ ಹೆಚ್ ಬ್ಲಾಕ್ ನಿವಾಸಿ ಸತೀಶ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಜೂನ್ 2018ರಲ್ಲಿ ದೂರು ದಾಖಲಿಸಿದ್ದರು. ವಾಣಿ ವಿಲಾಸ ವಾಟರ್ ವರ್ಕ್ಸ್ ನಿಂದ ಅವರು 340. 30 ರೂಪಾಯಿ ನೀರಿನ ಬಿಲ್ ಪಡೆದುಕೊಂಡಿದ್ದರು. ಆದಾಗ್ಯೂ, ಸತೀಶ್ ಕೇವಲ 340 ರೂಪಾಯಿ ಮಾತ್ರ ಪಾವತಿಸಿದ್ದರು .
ಜುಲೈ ತಿಂಗಳಲ್ಲಿ ಸತೀಶ್ 341 ರೂ ಬಿಲ್ ಪಡೆದುಕೊಂಡಿದ್ದು, ಕಳೆದ ಬಾರಿ 30 ಪೈಸೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ 70 ಪೈಸೆ ದಂಡ ವಿಧಿಸಲಾಗಿತ್ತು. ಇದರ ವಿರುದ್ಧ ಸತೀಶ್ ವಾಣಿ ವಿಲಾಸ್ ವಾಟರ್ ವರ್ಕ್ಸ್ ಹಾಗೂ ಅದರ ಮಾತೃ ಸಂಸ್ಥೆ ಮೈಸೂರು ಮಹಾನಗರ ಪಾಲಿಕೆ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.30 ಪೈಸೆಯನ್ನು ಹೆಚ್ಚುವರಿಯಾಗಿ ವಿಧಿಸಲಾಗಿದ್ದು, ದಂಡವನ್ನು ಪಾವತಿಸುವುದಿಲ್ಲ ಎಂದು ದೂರುದಾರರು ಅರ್ಜಿಯಲ್ಲಿ ಹೇಳಿದ್ದರು.
ಕಂಪ್ಯೂಟರ್ ಲೋಪದಿಂದಾಗಿ ಹೆಚ್ಚುವರಿಯಾಗಿ 30 ಪೈಸೆ ಪಡೆಯಲಾಗಿದ್ದು, ಜುಲೈ ತಿಂಗಳಲ್ಲಿ 341 ರೂಪಾಯಿ ನೀರಿನ ಶುಲ್ಕ ವಿಧಿಸಿರುವುದು ತಮ್ಮ ತಪ್ಪಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಹೇಳಿಕೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








