ಬೀದರ್:
ಸಚಿವ ಪ್ರಭು ಚೌಹಾಣ್ ಅವರಿಗೆ ಸೇರಿರುವ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಬಳಿ ನಡೆದಿದೆ.
ಸಚಿವ ಪ್ರಭು ಚೌಹಾಣ್ ಅವರನ್ನ ಬೀದರ್‌ನಿಂದ ಹೈದ್ರಾಬಾದ್ ಏರ್ಪೋರ್ಟ್‌ಗೆ ಬಿಡಲು ಹೋಗಲು ತೆರಳುತ್ತಿದ್ದ ವೇಳೆ ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಫಾರ್ಚುನರ್ ಕಾರು ಪಲ್ಟಿಯಾಗಿದೆ. ಅಪಘಾತಕ್ಕೀಡಾದ ಫಾರ್ಚೂನರ್ ಕಾರ್‌ನಲ್ಲಿ ಗನ್ ಮ್ಯಾನ್ ಮತ್ತು ಕಾರ್ಯಕರ್ತರು ಸಚವರನ್ನು ಕಾರಿನಲ್ಲಿ ಹಿಂಬಾಲಿಸುತ್ತಿದ್ದರು.
ಗನ್ ಮ್ಯಾನ್ ರವಿ ಹಾಗೂ ಚಾಲಕ ಸಂಜುಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಸಂಬಂಧ ತೆಲಂಗಾಣದ ಜಹೀರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹಿನ್ನೆಲೆ ಅವರಿಗೆ ಶುಭಕೋರಲು ಪ್ರಭು ಚವ್ಹಾಣ್ ಬೆಂಗಳೂರಿನತ್ತ ತೆರಳುತ್ತಿದ್ದರು. ಸಚಿವರು ಸರ್ಕಾರಿ ವಾಹನ ಇನೋವಾದಲ್ಲಿ ಪ್ರಯಾಣಿಸುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ