ಬೆಂಗಳೂರು:
ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಎರಡು ದಿನಗಳ ಹಿಂದೆಯಷ್ಟೆ ಪ್ರಭು ಚೌಹಾಣ್ ವಾಹನ ಚಾಲಕನಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಕೊರೊನಾ ಟೆಸ್ಟ್ ಮಾಡಿಸಿದ್ದರು. ಸದ್ಯ ವರದಿ ಬಂದಿದ್ದು ಸಚಿವರಿಗೂ ಸೋಂಕು ದೃಢಪಟ್ಟಿದೆ.
ಅದರಂತೆ, ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್‍ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇವರ ಜೊತೆಗೆ ಬೆಂಗಳೂರಿನ ಆಪ್ತ ಸಹಾಯಕ ಹಾಗೂ ಬೀದರಿನಲ್ಲಿರುವ ಸಚಿವರ ಗನ್‍ಮ್ಯಾನ್‍ಗೂ ಸೋಂಕು ದೃಢಪಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ