ಅರಸೀಕೆರೆ:
ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಸಿಟ್ಟಿನಿಂದ ಆಕ್ಷೇಪಾರ್ಹ ಪದಗಳನ್ನು ಬಳಸಿ ತಾಲೂಕು ಪಂಚಾಯಿತಿ ಸದಸ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕು ಪಂಚಾಯಿತಿ ಸಭೆಯಲ್ಲಿ ನಡೆದಿದೆ.
ನಿನ್ನೆ ಅರಸೀಕೆರೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿತ್ತು. ಈ ವೇಳೆ ತಾಲೂಕು ಪಂಚಾಯಿತಿ ಅನುದಾನದಲ್ಲಿ ಅವ್ಯವಹಾರವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದ ಹಿನ್ನಲೆಯಲ್ಲಿ ತೀವ್ರ ಆಕ್ರೋಶಗೊಂಡ ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಪ್ರತಿಕ್ರಿಯೆ ನೀಡಲು ಮುಂದಾದಾಗ ಮಾತಿನ ಚಕಮಕಿ ನಡೆಯಿತು. ಈ ವೇಳೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ.
ಯಾವ ಶಾಸಕನೂ ತಾಲೂಕು ಪಂಚಾಯಿತಿ ಸಭೆಗಳಿಗೆ ಬರಲ್ಲ. ನಾನು ನಿಮ್ಮ ಅನುಕೂಲಕ್ಕಾಗಿ ಸಭೆಗೆ ಬಂದ್ರೆ ನನ್ನನ್ನೇ ಪ್ರಶ್ನಿಸ್ತೀರಿ ಎಂದು ಹೇಳಿ ಆ ವೇಳೆ ಆಕ್ರೋಶಗೊಂಡು “ಯಾರೋ ಬೋ.. ಮಗ ಹೇಳಿದಾನೆ ಎಂದು ನನ್ನ ಪ್ರಶ್ನೆ ಮಾಡೋಕೆ ಬರ್ತೀರಾ…? ಎಂದು ಅವ್ಯಾಚ್ಯ ಪದ ಬಳಕೆ ಮಾಡಿ ಶಾಸಕ ಶಿವಲಿಂಗೇಗೌಡರು ಸಭೆಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ