ಮೈಸೂರು : ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮೊಬೈಲ್ ಬ್ಯಾನ್!!

ಮೈಸೂರು:

Related image

     ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಮೊಬೈಲ್ ಬಳಕೆ ಮೇಲೆ ನಿಷೇಧ ಹೇರಲು ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿ ತೀರ್ಮಾನಿಸಿದೆ.

      ದೇವಾಲಯಕ್ಕೆ ಬರುವ ಕೆಲವರು ಮೊಬೈಲ್ ನಲ್ಲಿ ಜೋರಾಗಿ ಮಾತನಾಡುವುದು, ಪೂಜಾ ಕೈಂಕರ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮುಂದಾಗುವುದರಿಂದ ಇತರ ಭಕ್ತರಿಗೆ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಮೊಬೈಲ್ ಇಡಲು ಪ್ರತ್ಯೇಕ ವ್ಯವಸ್ಥೆ:

Related image

     ಭಕ್ತಾದಿಗಳು ತಮ್ಮ ಮೊಬೈಲ್‌ಗಳನ್ನು ದೇವಸ್ಥಾನ ಹೊರಗೆ ಸುರಕ್ಷಿತವಾಗಿ ಇಡಲು ಪ್ರತ್ಯೇಕ ವಿಭಾಗ ಸ್ಥಾಪಿಸಲಾಗುವುದು. ಇದಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ನಿರ್ಮಾಣವಾಗಿತ್ತಿರುವ ಶಾಪಿಂಗ್‌ ಕಾಂಪ್ಲೆಕ್ಸ್‌ನ ಒಂದು ಭಾಗವನ್ನು ಮೀಸಲಿಡಲಾಗುವುದು. 

      ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಛಾಯಾಚಿತ್ರ ತೆಗೆಯುವುದರ ಮೇಲೆ ಈಗಾಗಲೇ ನಿಷೇಧವಿದ್ದು, ಇನ್ನು ಮುಂದೆ  ದೇವಾಲಯಕ್ಕೆ ಬರುವವರು ಮೊಬೈಲ್ ಕೊಂಡೊಯ್ಯದಂತೆ ನಿಗಾ ವಹಿಸಲಾಗುತ್ತದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ