ಕಾಗಿನೆಲೆ:
ಶ್ರೀ ಕ್ಷೇತ್ರ ಕಾಗಿನೆಲೆಯಲ್ಲಿ ನಡೆದ ಶ್ರೀ ಕನಕ ಜಯಂತಿಯಲ್ಲಿ ಕನಕ ಮಾಲಾಧಾರಿಗಳಿಂದ ಹಾಗೂ ಕನಕನ ಹುಂಡಿಗಳಿಂದ ಸಂಗ್ರಹಿಸಿದ 40 ಸಾವಿರ(40,000) ರುಪಾಯಿ ದೇಣಿಗೆಯನ್ನು ಹಾಲುಮತ ಮಹಾಸಭಾದವರು ನೀಡಿದ್ದಾರೆ.
ಮೈಲಾರ ಶಾಖಾಮಠದ ಕಟ್ಟಡ ನಿರ್ಮಾಣದ ಅಭಿವೃದ್ಧಿಗಾಗಿ ಬಳಸಲು, ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಯವರಿಗೆ ಈ ದೇಣಿಗೆ ಹಣವನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.