ಸಂಯಮ ಕಳೆದುಕೊಂಡ ಕ್ಯಾಪ್ಟನ್ ಕೂಲ್ ಧೋನಿಗೆ ದಂಡ!!!

0
21

ಜೈಪುರ: 

       ‘ಕ್ಯಾಪ್ಟನ್ ಕ್ಯೂಲ್’ ಎಂದೇ ಕ್ರಿಕೆಟ್ ರಂಗದಲ್ಲಿ ಖ್ಯಾತರಾಗಿರುವ ಮಹೇಂದ್ರಸಿಂಗ್‍ಧೋನಿ ಅಂಪೈರ್‍ಗಳೊಂದಿಗೆ ವಾಗ್ವಾದ ನಡೆಸಿದ್ದರಿಂದ ಚೆನ್ನೈ ಸೂಪರ್​ ಕಿಂಗ್ಸ್​ನ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಪಂದ್ಯದ ಸಂಭಾವನೆಯ ಶೇ. 50 ರಷ್ಟು ದಂಡ ವಿಧಿಸಲಾಗಿದೆ.

       ರಾಜಸ್ಥಾನದ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ಭಾರೀ ಕುತೂಹಲ ಮೂಡಿಸಿದ್ದ ಅಂತಿಮ ಓವರ್ ಮಾಡಿದ ಬೆನ್‍ಸ್ಟೋಕ್ಸ್ ಎಸೆದ ನೋ ಬಾಲ್ ಆಗಿದ್ದರೂ ಕೂಡ ಅದನ್ನು ಅಂಪೈರ್‍ಗಳು ನಿರಾಕರಿಸಿದ್ದರು.

       ಇದರಿಂದ ತಾಳ್ಮೆ ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್‍ನ ನಾಯಕ ಮಹೇಂದ್ರ ಸಿಂಗ್ ಧೋನಿ ಅಂಪೈರ್‍ಗಳ ಜೊತೆ ವಾಗ್ವಾದ ನಡೆಸಿದರು. ಅಂಪೈರ್ ತೀರ್ಪು ಬದಲಿಸಲಿಲ್ಲ. ಇದರಿಂದ ಧೋನಿ ಬೇಸರದಿಂದಲೇ ಡಗ್​ಔಟ್​ಗೆ ವಾಪಸಾದರು.

      ನಂತರ ಚೆಂಡನ್ನು ಪರಿಶೀಲಿಸಿ ನೋ ಬಾಲ್ ಎಂದು ತೀರ್ಪು ನೀಡಿದರೂ, ಅಂತಿಮ ಎಸೆತದಲ್ಲಿ ಗೆಲ್ಲಲು 3 ರನ್‍ಗಳು ಬೇಕಾಗಿದ್ದ ಸೆನೇಟರ್ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಗೆ ಜಯ ತಂದಿಟ್ಟರು.

     ಆದರೂ ಸಂಯಮ ಕಳೆದುಕೊಂಡು ಕ್ರೀಡಾಂಗಣ ಪ್ರವೇಶಿಸಿದ್ದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಒಟ್ಟು ಸಂಭಾವನೆಯ ಅರ್ಧದಷ್ಟು ಮೊತ್ತವನ್ನು ದಂಡವಾಗಿ ತೆರುವಂತೆ ಐಪಿಎಲ್ ಶುಕ್ರವಾರ ಮುಂಜಾನೆ ಸೂಚಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

LEAVE A REPLY

Please enter your comment!
Please enter your name here