ಡಿಕೆಶಿ ಸಂಧಾನ : ಕಾಂಗ್ರೆಸ್ ನಲ್ಲೆ ಉಳಿಯುತ್ತೇನೆ ಎಂದ ಎಂಟಿಬಿ!!?

ಬೆಂಗಳೂರು :

DK Shivakumar visited MTB Nagaraj house  - Sakshi

      ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಂಟಿಬಿ ನಾಗರಾಜ್ ಅವರ ಮನವೊಲಿಕೆಗೆ ಕಾಂಗ್ರೆಸ್ ನಾಯಕರ ಪ್ರಯತ್ನ ಯಶಸ್ವಿಯಾಗಿದೆ ಎನ್ನಲಾಗಿದೆ.

      ಬೆಂಗಳೂರಿನ ಹೂಡಿಯಲ್ಲಿರುವ ನಾಗರಾಜ್ ಅವರ ಮನೆಗೆ ಇಂದು ಬೆಳಗ್ಗೆಯೇ ಸಚಿವ ಡಿಕೆ ಶಿವಕುಮಾರ್, ಪರಮೇಶ್ವರ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದ್ದರು, ಕೆಲವು ಗಂಟೆಗಳ ಚರ್ಚೆಯ ನಂತರ ಎಂಟಿಬಿ ನಾಗರಾಜ್ ಅವರು ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

      ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಎಂಟಿಬಿ ನಾಗರಾಜ್, ಸತತವಾಗಿ 3-4 ಗಂಟೆಗಳ ಕಾಲ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ನಾಯಕರು ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿದ್ದು, ನಾನೂ ಕೂಡ ಕಾಂಗ್ರೆಸ್ ನಲ್ಲೇ ಉಳಿಯುವ ಪ್ರಯತ್ನದಲ್ಲಿ ಇದ್ದೇವೆ, ನಮಗೆ ಸ್ವಲ್ಪ ಕಾಲವಕಾಶ ಕೊಡಿ ಎಂದು ಹೇಳಿದ್ದಾರೆ.

      ಡಾ.ಸುಧಾಕರ್ ಮತ್ತು ನಾನು ಒಂದೇ ದಿನ ರಾಜಿನಾಮೆ ನೀಡಿದ್ದೇವು, ಹಾಗಾಗಿ ಡಾ. ಸುಧಾಕರ್ ಜೊತೆಗೆ ಚರ್ಚಿಸಿ ಆ ನಂತರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

      ಡಿ.ಕೆ.ಶಿವಕುಮಾರ್ ಮಾತನಾಡಿ, ಮಧ್ಯರಾತ್ರಿ ಎಂಟಿಬಿ ಮನೆಗೆ ಬಂದಿದ್ದೆ. ನಾನು, ಎಂಟಿಬಿ ಒಟ್ಟಾಗಿ ಪಕ್ಷವನ್ನ ಕಟ್ಟಿದ್ದೇವೆ. ಅವರು ಗೆದ್ದಾಗಲೆಲ್ಲಾ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ನಾವೆಲ್ಲರೂ ಒಟ್ಟಾಗಿ ಇರೋಣಾ, ಒಟ್ಟಿಗೆ ಸಾಯೋಣಾ ಅಂತ ಹೇಳಿದ್ದೀವಿ
ಕುಟುಂಬ ಅಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತೆ. ಅದನ್ನೆಲ್ಲಾ ಬಗಹರಿಸುತ್ತೇವೆ ಅನ್ನೋ ಅಭಯ ನೀಡಿದ್ದೇವೆ. ಸುಧಾಕರ್ ಅವರ ಮನವೊಲಿಸೋದಾಗಿ ಎಂಟಿಬಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link