ಕೊಡಗು:
ಹೈಸ್ಕೂಲ್ ಶಿಕ್ಷಕಿ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ ನಡೆದಿದ್ದು, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾಳೆಲೆ ಗ್ರಾಮದಲ್ಲಿ ನಡೆದಿದೆ.
ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಬೆಳಗ್ಗೆ 8.15ರ ಸುಮಾರಿಗೆ ಶಾಲಾ ವಾಹನಕ್ಕಾಗಿ ಕಾಯುತ್ತ ನಿಂತಿದ್ದ ಶಿಕ್ಷಕಿ ಆಶಾ ಕಾವೇರಮ್ಮ(50)ರ ಮೇಲೆ ಐದು ಬಾರಿ ಗುಂಡು ಹಾರಿಸಿದ ದುಷ್ಕರ್ಮಿ ಬಳಿಕ ತಾನು ಕೂಡ ಕಾಫಿ ತೋಟದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಚಿಮಡ ಜಗದೀಶ್(60) ಆತ್ಮಹತ್ಯೆಗೆ ಶರಣಾದ ಆರೋಪಿ.
ಇನ್ನು ಘಟನೆ ವೇಳೆ ಶಿಕ್ಷಕಿ ರಕ್ಷಣೆಗೆ ಮುಂದಾದ ವಿದ್ಯಾರ್ಥಿ ದಿನೇಶ್, ಕಾರ್ಮಿಕ ರಾಜುಗೆ ಗುಂಡು ತಗುಲಿದೆ. ವೈದ್ಯರು ಗಾಯಾಳುಗಳು ದೇಹಕ್ಕೆ ಹೊಕ್ಕಿದ್ದ ಗುಂಡುಗಳನ್ನು ಹೊರತೆಗೆದು ಚಿಕಿತ್ಸೆ ನೀಡುತ್ತಿದ್ದಾರೆ.