700 ರ ಗಡಿದಾಟಿದ ಮಟನ್ ರೇಟ್!!!

ಬೆಂಗಳೂರು : 

      ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಮಟನ್ ಬೆಲೆ ದಿಢೀರನೇ ಕೆಜಿಗೆ 700 ರೂ. ವರೆಗೆ ತಲುಪಿದೆ.

      ರಾಜ್ಯದಲ್ಲಿ ಕಳೆದ ಮೂರು ತಿಂಗಳ ಹಿಂದೆ ಮಟನ್ ಬೆಲೆ ಕೆಜಿಗೆ 450 ರೂ. ನಿಂದ 550 ರೂ. ವರೆಗೆ ಇತ್ತು. ಈಗ ದಿಢೀರನೇ ಏಕಾಏಕಿ 650 ರೂ.ನಿಂದ 700 ರೂ.ಗೆ ಏರಿಕೆಯಾಗಿದೆ.

      ಕುರಿ ಸಾಕಾಣಿಕೆ ಇಳಿಕೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದ್ದು, ಸಂಚಾರಿ ಕುರಿ ಸಾಕಾಣಿಕೆ ಸಂಖ್ಯೆ ಕಡಿಮೆಯಾಗಿದೆ. ಮಾರಾಟಕ್ಕೆ ಕುರಿಗಳು ಸಿಗುತ್ತಿಲ್ಲವಾದ್ದರಿಂದ ಮಾಂಸದ ಬೆಲೆಯೂ ಏರಿಕೆಯಾಗಿದೆ.  ಜೊತೆಗೆ ಚಳಿಗಾಲದಲ್ಲಿ ಕುರಿಗಳು ಚಳಿ ತಡೆಯಲಾರದೇ ಸಾಯುತ್ತಿವೆ. ಈ ಎಲ್ಲಾ ಕಾರಣದಿಂದ ಮಟನ್ ಬೆಲೆ ಹೆಚ್ಚಳವಾಗಿದೆ.

Image result for ಕುರಿ"

      ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬಾಯ್ಲರ್ ಕೋಳಿ ಲಗ್ಗೆ ಇಟ್ಟಿರುವುದು ಸಹ ಮಟನ್ ಮಾರಾಟಗಾರರಿಗೆ ಹೊಡೆತ ನೀಡಿದೆ. ಮುಂದಿನ ಯುಗಾದಿ ವೇಳೆಗೆ ಮಾಂಸದ ಬೆಲೆ 800 ರೂ. ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ .

      ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಈರುಳ್ಳಿ ಉತ್ಪಾದನೆ ಕುಸಿತ ಕಂಡು ಗ್ರಾಹಕರ ಕಣ್ಣಲ್ಲೂ ನೀರು ತರಿಸಿತ್ತು. ಇದೀಗ ಎಲ್‌ಪಿಜಿ ಗ್ಯಾಸ್, ತರಕಾರಿ ಬೆಲೆಗಳೂ ಹೆಚ್ಚಳವಾಗಿರುವುದರೊಂದಿಗೆ ಮಟನ್ ದರ ಏರಿಕೆಯಾಗಿರುವುದು ಗ್ರಾಹಕರಿಗೆ ಬೇಸರ ಮೂಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap