ಮೈಸೂರು ಮೃಗಾಲಯದ ಪ್ರವೇಶ ದರ ದಿಢೀರ್ ಏರಿಕೆ!!!

ಮೈಸೂರು:

      ಮೈಸೂರಿನಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಜಾಗ ಮೃಗಾಲಯದ ಪ್ರವೇಶ ದರವನ್ನು ಏರಿಕೆ ಮಾಡಿದೆ.

      ಹೌದು, ಸಾಮಾನ್ಯ ದಿನ ಹಾಗೂ ವಾರಾಂತ್ಯದಲ್ಲಿ ಪ್ರವೇಶ ದರ ಸೇರಿ ಇನ್ನಿತರೆ ದರಗಳನ್ನು ಹೆಚ್ಚಳ ಮಾಡುವ ಮೂಲಕ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಿದೆ. ಮೃಗಾಲಯದ ಹೊಸ ಮತ್ತು ಹಳೆ ದರದ ವಿವರ ಇಂತಿದೆ.

ಏರಿಕೆಯಾದ ಪ್ರವೇಶ ದರ ಇಂತಿದೆ:

  • ವಯಸ್ಕರು- ಹಳೆ ದರ 60 ರೂ. ಹೊಸ ದರ 80ರೂ. ಹೆಚ್ಚಳ 20ರೂ.
  • ಮಕ್ಕಳು- ಹಳೆ ದರ 30 ರೂ. ಹೊಸ ದರ 40 ರೂ. ಹೆಚ್ಚಳ 10 ರೂ.
  • ವಾರಂತ್ಯದಲ್ಲಿ ವಯಸ್ಕರಿಗೆ- ಹಳೆ ದರ 80 ರೂ. ಹೊಸ ದರ 100 ರೂ. ಹೆಚ್ಚಳ 20 ರೂ.
  • ವಾರಂತ್ಯದಲ್ಲಿ ಮಕ್ಕಳಿಗೆ- ಹಳೆ ದರ 40 ರೂ. ಹೊಸ ದರ 50 ರೂ. ಹೆಚ್ಚಳ 10 ರೂ.

ಪಾರ್ಕಿಂಗ್‌ ಹಾಗೂ ಇತರೆ ದರವೂ ದುಬಾರಿ:

  • ಪಾರ್ಕಿಂಗ್‌ ಬಸ್- 100 ರೂ. ಕಾರು – 50 ರೂ. ಟೆಂಪೋ-ಟಿಟಿ- 80 ರೂ. ಸ್ಕೂಟರ್ -20 ರೂ.
  • ಕ್ಯಾಮೆರಾ  – 100 ರೂ. ಕ್ಯಾಮೆರಾ ವಿಡಿಯೋ -200 ರೂ.
  • ಲಗೇಜ್​ – 10 ರೂ.

ವಾರಾಂತ್ಯದಲ್ಲಿ ಬ್ಯಾಟರಿ ಚಾಲಿತ ವಾಹನ ದರ ಪಟ್ಟಿ:

  • ಬ್ಯಾಟರಿ ಚಾಲಿತ ವಾಹನ : ಒಬ್ಬರಿಗೆ -180 ರೂ. ಹಳೆಯ ದರ-150 ರೂ. ಹೆಚ್ಚಳ 30 ರೂ.
  • ಬ್ಯಾಟರಿ ಚಾಲಿತ ವಾಹನ : ಮಕ್ಕಳಿಗೆ – 100 ರೂ. ಹಳೆಯ ದರ-90 ರೂ. ಹೆಚ್ಚಳ 10 ರೂ.

       ಮೈಸೂರಿಗೆ ಪ್ರವಾಸ ಬರುವ ಪ್ರವಾಸಿಗರಿಗೆ ಇದೊಂದು ಕಹಿ ಸುದ್ದಿಯಾಗಿದ್ದು, ಮೃಗಾಲಯದ ಪ್ರವೇಶ ದರ ದಿಢೀರ್​ ಏರಿಕೆ ಮಾಡಿರುವುದು ಪ್ರವಾಸಿಗರಿಗೆ ಹೊರೆಯಾಗಿ ಪರಿಣಮಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap