ಮೈಸೂರು:
ಖ್ಯಾತ ಪ್ರವಾಸಿ ತಾಣ ಅಂಬಾ ವಿಲಾಸ ಮೈಸೂರು ಅರಮನೆಗೂ ಕೊರೊನಾ ವೈರಸ್ ಭೀತಿ ಆವರಿಸಿದೆ.
ಅರಮನೆ ಬ್ರಹ್ಮಪುರಿ ದ್ವಾರದ ಬಳಿಯ ಕ್ವಾಟ್ರಸ್ ನಲ್ಲಿ ನೆಲೆಸಿ ಒಂಟೆ ಉಸ್ತುವಾರಿ ನೋಡಿಕೊಳ್ಳುತ್ತಿರವ ವ್ಯಕ್ತಿಯ ಪುತ್ರನಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಈ ಕಾರಣಕ್ಕಾಗಿ ಇಂದು ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇಂದು ಅರಮನೆಯ ಆವರಣ ಮತ್ತು ಅರಮನೆಯ ಒಳಾಂಗಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿತನ ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ