ಬೆಂಗಳೂರು:
ಆರ್ಟ್ ಆಫ್ ಲೀವಿಂಗ್‍ನ ಆಯುರ್ವೇದಿಕ್ ಆಸ್ಪತ್ರೆಯಿಂದ ಇಂದಿನಿಂದ (ಶುಕ್ರವಾರ) ಎರಡು ದಿನಗಳ ಕಾಲ ಗುದರೋಗಗಳ ಮತ್ತು ಪ್ಯಾರಾ ಸರ್ಜಿಕಲ್ ವಿಧಾನಗಳ ಕುರಿತು ರಾಷ್ಟ್ರೀಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಆರ್ಟ್ ಆಫ್ ಲೀವಿಂಗ್‍ನ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ನಡೆಯಲಿರುವ ಕಾರ್ಯಾಗಾರಕ್ಕೆ ಆರ್ಟ್ ಆಫ್ ಲೀವಿಂಗ್‍ನ ಮುಖ್ಯಸ್ಥರಾದ ರವಿಶಂಕರ ಗುರೂಜಿ ಚಾಲನೆ ನೀಡಲಿದ್ದಾರೆ.
ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ನಡೆಯುವ ಕಾರ್ಯಾಗಾರದಲ್ಲಿ ದೇಶದ ವಿವಿಧ ಭಾಗಗಳಿಂದ ತಜ್ಞ ವೈದ್ಯರು ಆಗಮಿಸಲಿದ್ದಾರೆ. ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ ಮಾಜಿ ಡೀನ್ ಡಾ.ಮನೋರಂಜನ್ ಸಾಹೂ, ಚಂಡೀಗಢ ಸರ್ಕಾರಿ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸೆ ಮುಖ್ಯಸ್ಥ ಡಾ.ಎ.ಕೆ ಅತ್ರಿ, ತಿರುವನಂತಪುರಂನ ಆಯುರ್ವೇದ ಮೂಳೆ ತಜ್ಞ ಡಾ.ಸುರೇಶ್ ಕುಮಾರ್ ಸೇರಿದಂತೆ ಶ್ರೀಲಂಕಾ ಹಾಗೂ ಭಾರತದ 21 ಜನ ಆಯುರ್ವೇದ ತಜ್ಞ 50 ಕ್ಕೂ ಹೆಚ್ಚು ಆಯುರ್ವೇದ ಶಸ್ತ್ರ ಚಿಕಿತ್ಸಕರು ಪಾಲ್ಗೊಳ್ಳಲಿದ್ದಾರೆ.
ಇದೇ ಕಾರ್ಯಾಗಾರದಲ್ಲಿ ಪ್ರಪಂಚದಲ್ಲಿಯೇ ಪ್ರಥಮ ಬಾರಿಗೆ ಆಯುರ್ವೇದ ಆಸ್ಪತ್ರೆಗಳಲ್ಲಿ ಗುದ ರೋಗಗಳ ಸ್ಕ್ಯಾನಿಂಗ್ ಮಷಿನ್ ಅಳವಡಿಸಲಾಗಿದ್ದು, ಅತ್ಯಾಧುನಿಕ ಸ್ಕ್ಯಾನಿಂಗ್ ಸೌಲಭ್ಯ ಚಾಲನೆಗೊಳಿಸಲಾಗುವುದು.
ಡೆನ್ಮಾರ್ಕ್‍ನಿಂದ ವಿಶೇಷ ಸ್ಕ್ಯಾನಿಂಗ್ ಯಂತ್ರ ತರಿಸಲಾಗಿದ್ದು ಗುದ ರೋಗಗಳಿಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ಕಂಡು ಹಿಡಿಯುವ ಕ್ಷಮತೆಯನ್ನು ಹೊಂದಿದೆ. ಭಾರತದಲ್ಲಿ ಇದೇ ಮೊದಲಬಾರಿಗೆ ಈ ಸಾಧನವನ್ನು ಆಸ್ಪತ್ರೆಯಲ್ಲಿ ಪರಿಚಯಿಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








