ಹಂಪಿಯಲ್ಲಿ ಹೊಸ ಹಾವಿನ ಪ್ರಬೇಧ ಪತ್ತೆ

ಬಳ್ಳಾರಿ:
 
    ಹಂಪಿ ಈಗ ಬರಿ ಐತಿಹಾಸಿಕ ತಾಣ ಮಾತ್ರವಲ್ಲದೆ ಅದು ಜೈವಿಕ ಸಂಪತ್ತು ಹೊಂದಿರುವ ಸ್ಥಳ ಕೂಡ ಎಂದು ಸಾಬೀತಾಗಿದೆ ಏಕೆ ಎಂಬ ಪ್ರಶ್ನೆಗೆ ಉತ್ತರ  ವಿರಳಾತಿ ವಿರಳವಾದ ಹೊಸ ಪ್ರಭೇದದ ಹಾವೊಂದು ಹಂಪಿಯ ಕಮಲಾಪುರದಲ್ಲಿ ಪತ್ತೆಯಾಗಿದೆ.ಸ್ವೀಡನ್ ಮೂಲದ ಸಸ್ಯಶಾಸ್ತ್ರಜ್ಞ ಮತ್ತು ಸ್ಥಳೀಯ ವನ್ಯಜೀವಿ ತಜ್ಞ ಪೀಟರ್ ಅಲ್ಬಿನ್ಸನ್ ಎಂಬುವವರು ಈ ಹೊಸ ಪ್ರಬೇಧದ ಹಾವನ್ನು ಪತ್ತೆ ಹಚ್ಚಿದ್ದಾರೆ. 

     ಗುಡ್ಡಗಳತ್ತ ಪ್ರವಾಸ ಕೈಗೊಳ್ಳುವ ಪೀಟರ್ ಅವರು,ಹಂಪಿಯ ದರೋಜಿಗೆ ಸ್ಥಳೀಯ ವನ್ಯಜೀವಿ ತಜ್ಞ ಪಂಪಾಯಸ್ವಾಮಿ ಮಾಲ್ಮೇತ್ ಅವರೊಂದಿಗೆ ಭೇಟಿ ನೀಡಿದ್ದಾರೆ ಆಗ ಈ ಹೊಸ ಪ್ರಭೇದದ ಹಾವು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
     ಪತ್ಹಾತೆಯಾದ ಹಾವು ಸುಮಾರು 12 ಇಂಚಿಗೂ ಕಡಿಮೆ ಇದೆ.ಅವರು ಕಾಡಿನೊಳಗೆ ಹೋಗುತ್ತಿದ್ದ ವೇಳೆ ಸ್ಥಳದಲ್ಲಿ ಏನೋ ಸರಿದು ಹೋಗುತ್ತಿದ್ದ ಹಾಗೆ ಕಾಣಿಸಿತು ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಪರಿಶೀಲನೆ ನಡೆಸುವಂತೆ ತಿಳಿಸಿದಾಗ ಅವರು ಹಾವಿನಂತೆ ಕಾಣಿಸುತ್ತಿದೆ ಎಂದು ತಿಳಿಸಿದರು. ಬಳಿಕ ಅದು “ಬ್ರೈಡಲ್ ಸ್ನೇಕ್” ಎಂಬುದಾಗಿ ತಿಳಿದುಬಂದಿತು. ಈ ಹಾವು ಕಳೆದ 23 ವರ್ಷಗಳಿಂದ ಎಲ್ಲಿಯೂ ಕಾಣಿಸಿರಲಿಲ್ಲ ಎಂದು ಮಾಲ್ಮೇತ್ ಅವರು ಹೇಳಿದ್ದಾರೆ.

ಈ ಹಾವು ಹೋಲಿಕೆಯಲ್ಲಿ ಕಟ್ಟುಹಾವಿನಂತೆ ಕಾಣಿಸುತ್ತಿತ್ತು. ಆದರೆ ಈ ಹಾವು ವಿಷಕಾರಿಯಾಗಿರುವುದಿಲ್ಲ ಎಂದು ಉರುಗ ತಜ್ಞರು ಹೇಳಿದ್ದಾರೆ ಎಂದು ಮಾಲ್ಮೇತ್ ತಿಳಿಸಿದ್ದಾರೆ.
                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

 

Recent Articles

spot_img

Related Stories

Share via
Copy link