ಬಳ್ಳಾರಿ:
ಕಾಗಿನೆಲೆ ಶಾಖಾಮಠವನ್ನು ಉದ್ಘಾಟನಾ ಕಾರ್ಯಕ್ರಮದ ತಯಾರಿ ಕುರಿತು ದಲಿತ ಹಿಂದುಳಿದ ಮಠಾದೀಶರ ಒಕ್ಕೂಟ ಇಂದು ಮೈಲಾರಕ್ಕೆ ಭೇಟಿ ನೀಡಿ ವೀಕ್ಷಿಸಿತು.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಕಾಗಿನೆಲೆ ಶಾಖಮಠವನ್ನು ಶ್ರೀ ನಿರಂಜನನಂದಪುರಿ ಮಹಾಸ್ವಾಮಿಜಿ ಶ್ರಮದಿಂದ ಕೇವಲ 154 ದಿನಗಳಲ್ಲಿ ಕಟ್ಟಲಾಗಿದೆ. ಮಠದ ಕಾಮಗಾರಿಯನ್ನು ವೀಕ್ಷಿಸಿ ಮೇ 7, 8ಹಾಗೂ 9 ರಂದು ಶಾಖಮಠದ ಉದ್ಘಾಟನೆ ಸಮಾರಂಭದ ನಡೆಸಲು ಚರ್ಚೆ ಮಾಡಲಾಯಿತು.
“ದಲಿತ ಹಿಂದುಳಿದ ಮಠಾದೀಶರ ಒಕ್ಕೂಟ” ಮಠಾದೀಶರುಗಳಾದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಡಾ.ಶ್ರೀ ಶಾಂತವೀರ ಮಹಾಸ್ವಾಮಿಜಿ, ಮಾದರ ಚೆನ್ನಯ್ಯ ಗುರುಪೀಠದ, ಶ್ರೀ ಮಾದರಚನ್ನಯ್ಯ ಮಹಾಸ್ವಾಮಿಜಿ, ಭಗಿರಥ ಪೀಠದ ಶ್ರೀ ಪುರುಷೋತ್ತಮನಂದಪುರಿ ಮಹಾಸ್ವಾಮಿಜಿ, ಯಾದವ ಪೀಠದ ಶ್ರೀ ಯಾದವನಾಂದ ಮಹಾಸ್ವಾಮಿಗಳು, ಕಾಗಿನೆಲೆ ಶಾಖಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಜಿ ಯವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ