‘ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ’ – ಐಟಿ ಸ್ಪಷ್ಟನೆ!

ಬೆಂಗಳೂರು:

      ಆದಾಯ ತೆರಿಗೆ ಇಲಾಖೆಯ ಚಟುವಟಿಕೆಗಳನ್ನು ರಾಜಕೀಯಗೊಳಿಸಬೇಡಿ, ಇದು ವ್ಯಕ್ತಿಗತವಾದ ದಾಳಿಯಲ್ಲ ಎಂದು ಐಟಿ ಇಲಾಖೆ ಸ್ಪಷ್ಟನೆ ನೀಡಿದೆ.

      ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಮತ್ತು ಅವರಿಗೆ ಸಂಬಂಧಿಸಿದ ವ್ಯಕ್ತಿಗಳ ಕಚೇರಿ, ಮನೆಗಳಲ್ಲಿ ದಾಳಿ ಆಗಿದೆ ಹೊರತು, ಯಾವುದೇ ಶಾಸಕ, ಸಂಸದ, ಸಚಿವರ ಮನೆ, ಕಚೇರಿಗಳಲ್ಲಿ ದಾಳಿ ಆಗಿಲ್ಲ ಎಂದು ಕೇಂದ್ರ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

      ಅಧಿಕಾರಿಗಳು ಮತ್ತು ದಾಖಲೆಗಳ ಭದ್ರತೆಗಾಗಿ ಕೇಂದ್ರೀಯ ಭದ್ರತಾ ಪಡೆಗಳನ್ನು ಬಳಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಐಟಿ ಇಲಾಖೆ ಗುರುವಾರ ಸ್ಪಷ್ಟನೆ ನೀಡಿದೆ. 

      ತೆರಿಗೆ ವಂಚನೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು, ಬ್ರೀವರಿಗಳು, ಎಂಎನ್‌ಸಿಗಳು, ಗಣಿ ಧಣಿಗಳು, ಡಯಾಗ್ನಸ್ಟಿಕ್ ಕೇಂದ್ರಗಳು, ಟ್ರಸ್ಟ್‌ಗಳು, ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್, ಮೀನುಗಾರಿಕೆ ಮತ್ತು ಚಿತ್ರೋದ್ಯಮದ ಕ್ಷೇತ್ರದಲ್ಲಿ ತೆರಿಗೆಯಲ್ಲಿ ಅಕ್ರಮ ಕುರಿತು ಖಚಿತ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ .

     ಯಾವುದೇ ರಾಜಕೀಯ ಪಕ್ಷಪಾತವಿಲ್ಲದೆ ನಿರ್ಭೀತಿಯಿಂದ ಐಟಿ ಇಲಾಖೆ ತನ್ನ ಕಾರ್ಯಾಚರಣೆಯನ್ನು ವೃತ್ತಿಪರವಾಗಿ ಮುಂದುವರಿಸುತ್ತದೆ ಎಂದು ಸ್ಪಷ್ಟನೆಯಲ್ಲಿ ಹೇಳಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link