ಮೈಸೂರು:
ತಡರಾತ್ರಿ ವಯೋವೃದ್ಧ ದಂಪತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ನಾಗವಾಲದ ತೋಟದ ಮನೆಯಲ್ಲಿ ಸೋಮವಾರ ನಡೆದಿದೆ.
ಮೃತರನ್ನು ವೀರಣ್ಣ (80) ಪತ್ನಿ ಶಿವಮ್ಮ(75) ಎಂದು ಗುರುತಿಸಲಾಗಿದೆ. ಮೈಸೂರು-ಹುಣಸೂರು ರಸ್ತೆಯ ನಾಗವಾಲ ಬಳಿಯ ತೋಟದ ಮನೆಯಲ್ಲಿ ಕೃತ್ಯ ನಡೆದಿದೆ.
ತೋಟದಲ್ಲಿದ್ದ ಸೆಂಟ್ರಿಂಗ್ ಸಾಮಾನು ನೋಡಿಕೊಂಡು, ಅಲ್ಲೇ ಉಳಿದ್ದಿದ್ದ ವೃದ್ಧ ದಂಪತಿಗಳನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ದಂಪತಿಗೆ ನಾಲ್ವರು ಪುತ್ರಿಯರು ಹಾಗು ಓರ್ವ ಪುತ್ರ ಇದ್ದಾರೆ.
ಸ್ಥಳಕ್ಕೆ ಇಲವಾಲ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ತಿಳುದು ಬಂದಿಲ್ಲ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ