ಕಲಬುರಗಿ :
60 ವರ್ಷ ಪೂರೈಸಿದ ಬಡವರಿಗೆ ಮನೆ ಬಾಗಿಲಿಗೇ ವೃದ್ಧಾಪ್ಯ ವೇತನ ನೀಡುವ ಸೌಲಭ್ಯ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಈ ಮೂಲಕ ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ಸಿಹಿಸುದ್ದಿ ನೀಡಿದ್ದು, ವೃದ್ಧಾಪ್ಯ ವೇತನ ಪಡೆಯಲು ಇನ್ಮುಂದೆ ಜಿಲ್ಲಾಧಿಕಾರಿಗಳ ಕಚೇರಿ, ತಹಸೀಲ್ದಾರ್ ಕಚೇರಿಗಳಿಗೆ ಅಲೆಯ ಬೇಕಾಗಿಲ್ಲ. ತಾಲೂಕು ಕಚೇರಿಯಲ್ಲಿ ಆಯಾ ತಾಲೂಕಿನ ಬಡ ಜನರ ಆಧಾರ್ ಕಾರ್ಡ್ ಗಳ ಪಟ್ಟಿ ಇದ್ದು, ಯಾರಿಗೆ 60 ವರ್ಷ ತುಂಬುತ್ತದೆಯೋ ಅವರಿಗೆ ಅಂಚೆ ಮೂಲಕ ಇಲ್ಲವೇ ಗ್ರಾಮ ಲೆಕ್ಕಿಗರೇ ಖುದ್ದಾಗಿ ವೃದ್ಧಾಪ್ಯ ವೇತನ ಯೋಜನೆಯ ಸೇರ್ಪಡೆ ಪತ್ರ ನೀಡಬೇಕು ಎಂದು ಹೇಳಿದ್ದಾರೆ.
ಅರ್ಹ ಫಲಾನುಭವಿಗಳಿಂದ ಬ್ಯಾಂಕ್ ಪಾಸ್ ಪುಸ್ತಕ ಪಡೆದು, ತಾಲೂಕು ಕಚೇರಿಗೆ ಕರೆತಂದು ಕೇವಲ ಫೋಟೋ ತೆಗೆಸಿಕೊಂಡು ಸರಳವಾಗಿ ಯೋಜನೆಗೆ ಸೇರ್ಪಡೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಯಸ್ಸಾದವರನ್ನು ಅಲೆದಾಡಿಸಬಾರದು ಎಂದೂ ಸಚಿವರು ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ