ಪಾವಗಡ : ದಲಿತ ಎಂಬ ಕಾರಣಕ್ಕೆ ಸಂಸದರಿಗೆ ಹಟ್ಟಿ ಪ್ರವೇಶ ನಿರಾಕರಣೆ !!

ತುಮಕೂರು:

      ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಅವರನ್ನು ದಲಿತ ಎಂಬ ಕಾರಣಕ್ಕೆ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಪ್ರವೇಶಕ್ಕೆ ಅಡ್ಡಿಪಡಿಸಿರುವ ಘಟನೆ ನಡೆದಿದೆ.

     ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಗೆ ಸಂಸದ ಎ. ನಾರಾಯಣಸ್ವಾಮಿ ಬೆಂಗಳೂರಿನ ಬಯೋಕಾನ್ ಕಂಪನಿ ಹಾಗೂ ನಾರಾಯಣ ಹೃದಯಾಲಯದ ಅಧಿಕಾರಿಗಳ ಜೊತೆ ತೆರಳಿದ್ದರು.

      ಈ ವೇಳೆ ಎದುರಾದ ಗೊಲ್ಲರಹಟ್ಟಿ ನಿವಾಸಿಯ ಮುಖಂಡರು ಹಟ್ಟಿಯ ಪ್ರವೇಶ ದ್ವಾರದಲ್ಲೇ ಸಂಸದರನ್ನು ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಅಲ್ಲೇ ಕೂರುವಂತೆ ಕೇಳಿಕೊಂಡಿದ್ದಾರೆ. ನಿಮ್ಮ ಜನಾಂಗದವರು ಹಟ್ಟಿ ಒಳಗೆ ಬರಬಾರದು ಎಂದು ತಂಡದಲ್ಲಿದ್ದ ಇನ್ನಿತರರನ್ನು ಹಟ್ಟಿ ಒಳಕ್ಕೆ ಬಿಟ್ಟುಕೊಂಡು, ಇವರನ್ನು ಅಲ್ಲೇ ಕೂರಿಸಿದ್ದಾರೆ. ಅವರನ್ನು ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.

     ಕೊನೆಗೆ ಸಂಸದರು ಅಲ್ಲಿಂದ ಹಿಂತಿರುಗಬೇಕಾಗಿ ಬಂದಿತ್ತು. ಪೊಲೀಸರು ಹಾಗೂ ತಾಲೂಕು ಮಟ್ಟದ ಸರಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link