ಮುಂಬೈ:
ದೇಶದ ಪ್ರಮುಖ ಪೆಟ್ರೋಲಿಯಮ್ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಬಳಕೆದಾರ ಇಂಧನ ಅಗತ್ಯಗಳನ್ನು ಪೂರೈಸಲು ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ಹೂಡಿಕೆಗೆ ಚಿಂತನೆ ನಡೆಸುತ್ತಿದೆ ಎಂದು ಸಂಜೀವ್ ಸಿಂಗ್ ತಿಳಿಸಿದ್ದಾರೆ.
ಐಒಸಿ ತನ್ನ 11 ಸಂಸ್ಕರಣಾ ಘಟಕಗಳ ಮೂಲಕ ದೇಶದ ದಿನನಿತ್ಯ ಅಗತ್ಯವಿರುವ 5 ಮಿಲಿಯನ್ ಬ್ಯಾರಲ್ ಗಳ ಪೆಟ್ರೋಲಿಯಂ ಬೇಡಿಕೆ ಈಡೇರಿಸುವುದರೊಂದಿಗೆ ದೇಶದ ತೈಲ ಉದ್ಯಮದಲ್ಲಿ ದೈತ್ಯ ರೀತಿಯಲ್ಲಿ ಬೆಳೆದಿದ್ದು ಇನ್ನು ಸಾಮರ್ಥ್ಯ ವಿಸ್ತರಿಸಲು ಮುಂದಾಗಿದೆ.
ಮುಂದಿನ ದಿನಗಳಲ್ಲಿ ಐಒಸಿಯನ್ನು ರೆಡಿ ಕಾರ್ಪೋರೇಟ್ ಆಗಿ ಮಾಡಲು ನಮಗೆ ಹೂಡಿಕೆಗಳ ಅಗತ್ಯತೆ ಇದೆ ಮತ್ತು ನಾವು ಅದಕ್ಕಾಗಿ ಶ್ರಮಿಸುವ ಅಗತ್ಯವೂ ಇದೆ ಎಂದು ಸಿಂಗ್ ತಿಳಿಸಿದರಲ್ಲದೇ ಏರ್ ಇಂಡಿಯಾ ಇಂಧನ ಬಾಕಿ ವಿಷಯ ಕೇಳಿದಾಗ ಅದರ ಬಗ್ಗೆ ತಜ್ಞನರ ಸಮಿತಿಯಿಂದ ಸಲಹೆ ಪಡೆದು ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ