ಚಿತ್ರದುರ್ಗ:
ಸರ್ಕಾರಿ ಅಂಬ್ಯುಲೆನ್ಸ್ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಚಿತ್ರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಲಾಕ್ ಡೌನ್ ಆದ್ದರಿಂದ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ. ಹೀಗಾಗಿ ಎಲ್ಲಾ ಬಾರ್ ಗಳು ಬಂದ್ ಆಗಿವೆ. ಈ ನಡುವೆ ಅಲ್ಲಲ್ಲಿ ಮದ್ಯವನ್ನು ಕಳ್ಳತನ ಮಾಡುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ಆದರೆ ಚಿತ್ರದುರ್ಗದಲ್ಲಿ ಸರ್ಕಾರಿ ಆಂಬುಲೆನ್ಸ್ ಅನ್ನೇ ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದಾರೆ.
ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಮದ್ಯ ಸಾಗಾಟ ಆರೋಪದ ಮೇರೆಗೆ, ಆಂಬ್ಯುಲೆನ್ಸ್ ಚಾಲಕ ಸುಹಾನ್, ಲ್ಯಾಬ್ ಟೆಕ್ನಿಶಿಯನ್ ಸಂತೋಷ್ ಹಾಗೂ ಅಂಬ್ಯುಲೆನ್ಸ್ ನಿಂದ ಓಮ್ನಿಗೆ ಮದ್ಯ ಶಿಫ್ಟ್ ಮಾಡುತ್ತಿದ್ದ ಶಿವಗಂಗ ಗ್ರಾಮದ ಜೀವನ್ ಹಾಗೂ ಗಿರೀಶ್ ಎಂಬುವವರನ್ನು ಬಂಧಿಸಲಾಗಿದೆ. ಇವರು 90 ರೂ ಬೆಲೆಬಾಳುವ ಮದ್ಯದ ಪೌಚ್ ಗಳನ್ನು 500 ರೂಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಉಳ್ಳಾರ್ತಿ ಗ್ರಾಮದ ಎರಡು ಬಾರ್ ಗಳಿಂದ ಮದ್ಯವನ್ನು ಓಮಿನಿಯಲ್ಲಿ ಬೇರೆಡೆಗೆ ಮದ್ಯ ಸಾಗಿಸುತ್ತಿದ್ದರೆಂದು ತಿಳಿದುಬಂದಿದೆ.
ಇದು ಹೊಳಲ್ಕೆರೆ ತಾಲೂಕಿನ ಎಚ್.ಡಿ.ಪುರ ಆರೋಗ್ಯ ಕೇಂದ್ರಕ್ಕೆ ಸೇರಿದ ಅಂಬ್ಯುಲೆನ್ಸ್ ಎನ್ನಲಾಗಿದ್ದು, ಅಂಬುಲೆನ್ಸ್ ನಲ್ಲಿದ್ದ 69 ಸಾವಿರ ರೂ ಬೆಲೆ ಬಾಳುವ 14 ಬಾಕ್ಸ್ ಮದ್ಯ, 1ಆಂಬ್ಯುಲೆನ್ಸ್, 1ಮಾರುತಿ ಓಮ್ನಿ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
