ತುಮಕೂರು : ಸ್ಕಿಮ್ಮಿಂಗ್‌ ಮಷಿನ್‌ ಬಳಸಿ ATM ಹಣ ದೋಚುತ್ತಿದ್ದ ಕಳ್ಳರ ಬಂಧನ!!

ತುಮಕೂರು :  

      ನಕಲಿ ಎಟಿಎಂ ಕಾರ್ಡ್​​ಗಳನ್ನು​ ಬಳಸಿ ಎಟಿಎಂ ಮಷಿನ್‌ಗಳಿಂದ ಗ್ರಾಹಕರ ಹಣ ಎಗರಿಸುತ್ತಿದ್ದ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ. 

     ಉಗಾಂಡ ಮೂಲದ ಐವಾನ್ ಕಾಂಬೊಂಗೆ, ಕೀನ್ಯಾ ಮೂಲದ ಲಾರೆನ್ಸ್ ಮಾಕಾಮು ಬಂಧಿತರು.

     ರಾಷ್ಟ್ರ ರಾಜಧಾನಿ ದೆಹಲಿಯಲ್ಲಿದ್ದ ಇಬ್ಬರೂ ಖದೀಮರು ಕಳೆದ ಅಕ್ಟೋಬರ್ ಹಾಗೂ ನವೆಂಬರ್ ನಿಂದ ತುಮಕೂರು ಜಿಲ್ಲೆಯ ಕುಣಿಗಲ್, ತುಮಕೂರು ನಗರ, ಕುಣಿಗಲ್, ಕೆ.ಬಿ ಕ್ರಾಸ್ ಸೇರಿದಂತೆ ಹಲವು ಎಟಿಎಂ ಗಳಲ್ಲಿ ಎಟಿಎಂ ಯಂತ್ರಗಳಿಗೆ ಸ್ಕಿಮ್ಮಿಂಗ್ ಮಷಿನ್ ಅಳವಡಿಸಿ ಕಾರ್ಡ್‍ಗಳ ಮಾಹಿತಿ ಕದಿಯುತ್ತಿದ್ದರು. ​

     ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೆ ಚೆನೈ, ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ನಕಲಿ ಕಾರ್ಡ್ ಬಳಸಿ ಹಣ ಲಪಟಾಯಿಸುತ್ತಿದ್ದರು ಎನ್ನಲಾಗಿದೆ. 

     ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ನಕಲಿ ಎಟಿಎಂ ಕಾರ್ಡ್​ ಬಳಸಿ ಮತ್ತು ಜನರಿಗೆ ಮೋಸ ಮಾಡಿ ಬೇರೆ ಬೇರೆ ಕಡೆಯಿಂದ ಖದೀಮರು ಕಳ್ಳತನ ಮಾಡಿದ್ದಾರೆ. ಈ ಕುರಿತು ನವೆಂಬರ್​ನಿಂದ ಡಿಸೆಂಬರ್​ವರೆಗೆ ಸುಮಾರು 60 ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 10 ಬ್ಯಾಂಕ್​ಗಳಿಗೆ ಸಂಬಂಧಿಸಿದ ಪ್ರಕರಣಗಳಿದ್ದು, ಮುಖ್ಯವಾಗಿ ಕುಣಿಗಲ್, ಭೀಮಸಂದ್ರ, ನಿಟ್ಟೂರು ಈ ಮೂರು ಕಡೆಗಳಲ್ಲಿ ಮತ್ತು ಬೇರೆ ಬೇರೆ ಬ್ಯಾಂಕ್​ಗಳಲ್ಲಿಯೂ ಖದೀಮರು ಎಲೆಕ್ಟ್ರಾನಿಕ್ ಡಿವೈಸ್​ಗಳನ್ನು ಬಳಸಿ ಹಣ ಕದ್ದಿದ್ದಾರೆ. ಇದು ಅಂತಾರಾಜ್ಯ ಗ್ಯಾಂಗ್ ಆಗಿದ್ದು, ​ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೆ ಬೆಂಗಳೂರು, ಚೆನ್ನೈ, ದೆಹಲಿ,ಬಾಂಬೆ, ವೆಲ್ಲೂರು, ಸೇರಿದಂತೆ ವಿವಿಧ ಎಟಿಎಂನಲ್ಲಿ ಹಣ ಡ್ರಾ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದರು.

     ನೂತನ ತಂತ್ರಜ್ಞಾನ ಹೊಂದಿರುವ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಮಷಿನ್ ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ವಂಚಕರು ಸ್ಕಿಮ್ಮಿಂಗ್ ಮಷಿನ್ ಅಳವಡಿಸುವಂತಹ ಹಳೆ ತಂತ್ರಜ್ಞಾನವನ್ನು ಹೊಂದಿರುವ ಎಟಿಎಂ ಮಷಿನ್​ಗಳನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಿದ್ದಾರೆ. ಈ ಎಟಿಎಂಗಳನ್ನು ಪತ್ತೆ ಹಚ್ಚಲು ಗೂಗಲ್​ ಮೊರೆ ಹೋಗಿದ್ದರು ಎಂಬುದು ತಿಳಿದುಬಂದಿದೆ.

     ಬಂಧಿತ ಆರೋಪಿಗಳಿಂದ ಸುಮಾರು 25 ಲಕ್ಷಕ್ಕೂ ಅಧಿಕ ನಗದು, 20 ನಕಲಿ ಎಟಿಎಂ ಕಾರ್ಡ್​ಗಳು, ಸ್ಕಿಮ್ಮಿಂಗ್ ಮಷಿನ್ ಹಾಗೂ ದೆಹಲಿ ನೋಂದಣಿಯ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link