ಬೆಂಗಳೂರು:
ಪೊಲೀಸ್ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಮರ್ಧನ್ ಅಲಿಯಾಸ್ ಮರ್ಧನ್ ಖಾನ್ ಗುಂಡೇಟು ತಿಂದ ಆರೋಪಿ. ಎರಡು ದಿನಗಳ ಹಿಂದಷ್ಟೇ ಪೇದೆ ನಾಗರಾಜ್ ಮೇಲೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಆರ್ ಟಿ ನಗರದ ಈರುಳ್ಳಿ ಮೈದಾನದಲ್ಲಿ ನಡೆದಿದೆ.
ಗುಂಡೇಟು ತಿಂದ ಆರೋಪಿ ಎರಡು ದಿನಗಳ ಹಿಂದೆ ನಗರದಲ್ಲಿ ಗಲಾಟೆ ಮಾಡಿದ್ದನು. ಪುಂಡ ಯುವಕರನ್ನ ಹಿಡಿಯಲು ಹೋದಾಗ ಪಿಸಿ ನಾಗರಾಜುಗೆ ಚಾಕು ಹಾಕಿ ಈತ ಪರಾರಿಯಾಗಿದ್ದನು. ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಬೆನ್ನು ಹತ್ತಿದ್ದರು.
ಬೆಳಗಿನ ಜಾವ ಸುಮಾರು 4 ಗಂಟೆಯ ವೇಳೆ ಪೊಲೀಸರು ಆತನನ್ನು ಹಿಡಿಯಲು ತೆರಳಿದ್ದಾಗ, ಮತ್ತೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ, ಆತ್ಮ ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮೊದಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು, ಆದರೂ ಯಾವುದಕ್ಕೂ ರೌಡಿ ಬಗ್ಗದ ಕಾರಣ ಮತ್ತೆ ಹಲ್ಲೆಗೆ ಮುಂದಾದ ಕಾರಣ ಗುಂಡು ಹಾರಿಸಿದ್ದಾರೆ.
ಈ ವೇಳೆ ಆರೋಪಿ ಕಾಲಿಗೆ ಎರಡು ಗುಂಡು ಬಿದ್ದಿದ್ದು, ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ