ಗಂಗಾವತಿ :
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಗಂಗಾವತಿಗೆ ಅಗಮಿಸುತ್ತಿದ್ದು, ಹನುಮ ಮಾಲಾಧಾರಿಗಳಿಂದ ಮೋದಿಗೆ ಹನುಮನ ಬೆಳ್ಳಿ ಗದೆ ಗಿಫ್ಟ್ ಕೊಡಲು ಸಿದ್ದತೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಕೊಡಲು 1,650 ಗ್ರಾಂ. ಬೆಳ್ಳಿ ಗದೆ ಗಿಫ್ಟ್ ಈಗಾಗಲೇ ಸಿದ್ಧವಾಗಿದೆ. ಈ ಗದೆಯನ್ನು ಕೊಲ್ಲಾಪೂರದಲ್ಲಿ ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲದೇ ಹನುಮ ಮಾಲಾಧಾರಿಗಳು ಗದೆಗೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಪ್ರಧಾನಿ ಮೋದಿ ಗೆದ್ದು ಬರಲಿ ಎಂದು ವಿಶೇಷ ಪೂಜೆ ಮಾಡಿಸಿದ್ದಾರೆ.
ಇಂದು ಮಧ್ಯಾಹ್ನ ಮೂರು ಗಂಟೆಗೆ ಗಂಗಾವತಿಯಲ್ಲಿ ಕನಕಗಿರಿ ರಸ್ತೆಯಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. ಸಂಸದ ಸಂಗಣ್ಣ ಕರಡಿ ಪರ ಮತಯಾಚನೆ ಮಾಡಲಿದ್ದಾರೆ. ಸುಮಾರು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಗಳಿವೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಆಯೋಜನೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
