ಬೆಂಗಳೂರು:
ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರ ಬೆಂಬಲಕ್ಕೆ ನಿಂತಿರುವ ನಟ ಚೇತನ್ ವರ್ತನೆಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರು ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೇತನ್ ಅವರು ಫೈರ್ ಸಂಸ್ಥೆಯನ್ನು ಮೀಟೂ ಅಭಿಯಾನಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷೆಯಾಗಿರುವ ಪ್ರಿಯಾಂಕಾ ಉಪೇಂದ್ರ ಅವರು ತಿಳಿದ್ದಾರೆ.
ಫೈರ್ ಸಂಸ್ಥೆಯ ಉದ್ದೇಶವೇ ಹಾದಿ ತಪ್ಪಿದೆ. ಅದರ ಉದ್ದೇಶವೇ ಬೇರೆ, ಈಗಿನ ಫೈರ್ ಸಂಸ್ಥೆಯೇ ಬೇರೆ. ಪ್ರಾರಂಭದಲ್ಲಿ ಫೈರ್ ಸಂಸ್ಥೆಯ ಉದ್ದೇಶ ಚಿತ್ರರಂಗದ ಸಮಸ್ಯೆಗಳನ್ನು ನಿವಾರಿಸುವುದಾಗಿತ್ತು. ಮಹಿಳೆಯರ ಸಮಸ್ಯೆಗಳನ್ನು ಅಂತರಿಕವಾಗಿ ಬಗೆಹರಿಸುವುದಾಗಿತ್ತು . ಮೀಟೂ ಅಭಿಯಾನದ ಕುರಿತು ತುಂಬಾ ಗೌರವವಿದೆ. ಆದರೆ ಮೀಟೂ ಅಭಿಯಾನಕ್ಕೆ ಫೈರ್ ಸಂಸ್ಥೆಯನ್ನು ಬಳಸಿಕೊಂಡಿದ್ದು ತಪ್ಪು. ಶ್ರುತಿ ಮಿ ಟೂ ಅಭಿಯಾನವನ್ನು ಫೈರ್ ಸಂಸ್ಥೆಯೊಂದಿಗೆ ಲಿಂಕ್ ಮಾಡಿದ್ದು ತಪ್ಪು, ಅವರು ಸಂಸ್ಥೆಯ ಉದ್ದೇಶವನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.