ಬೆಂಗಳೂರು :
ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿರೋ ಯುವತಿ ಇವತ್ತು ಮತ್ತೊಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ರಕ್ಷಣೆ ಕೊಡಿ ಅಂತ ವಿಪಕ್ಷ ನಾಯಕರ ಬಳಿ ಕೇಳಿಕೊಂಡಿದ್ದಾಳೆ.
ವಿಡಿಯೋದಲ್ಲಿ ಯುವತಿ ನನಗೆ ನನ್ನ ತಂದೆ, ತಾಯಿಯ ಸುರಕ್ಷತೆಯೇ ಮುಖ್ಯ. ಅದರ ಬಗ್ಗೆ ಗ್ಯಾರಂಟಿ ಸಿಕ್ಕ ಬಳಿಕ ಎಸ್‌ಐಟಿ ಮುಂದೆ ವಿಚಾರಣೆಗೆ ಬರುತ್ತೇನೆ. ಏನು ಹೇಳಿಕೆ ನೀಡಬೇಕೋ ಅದನ್ನ ನೀಡುತ್ತೇನೆ. ಅದಕ್ಕೂ ಮೊದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್, ಮಹಿಳಾ ಸಂಘಟನೆಗಳಿಗೆ ನಾನು ಕೇಳಿಕೊಳ್ಳೋದು ಏನು ಅಂದ್ರೆ, ನನ್ನ ತಂದೆ, ತಾಯಿಗೆ ರಕ್ಷಣೆ ಕೊಡಿ. ಅವರಿಗೆ ರಕ್ಷಣೆ ನೀಡಿದ್ದು ಖಚಿತವಾದರೆ ನಾನು ಬಂದು ಎಸ್‌ಐಟಿ ಮುಂದೆ ಹೇಳಿಕೆ ದಾಖಲಿಸುತ್ತೇನೆ ಎಂದು ತಿಳಿಸಿದ್ದಾಳೆ.
ಎರಡು ದಿನದಿಂದ ನನಗೆ ನ್ಯಾಯ ಸಿಗುತ್ತೆ ಅನ್ನೋ ನಿರೀಕ್ಷೆ ಹುಟ್ಟಿದೆ. ಮಾರ್ಚ್ 12ನೇ ತಾರೀಖು ಬೆಂಗಳೂರು ಕಮಿಷನರ್ ಮತ್ತು ತನಿಖಾ ತಂಡಕ್ಕೆ ನನ್ನ ವಿಡಿಯೋ ಕಳಿಸಿಕೊಟ್ಟಿದ್ದೆ. ಆದ್ರೆ ಅದನ್ನ ಅವತ್ತು ರಿಲೀಸ್ ಮಾಡಲಿಲ್ಲ. ಮಾರ್ಚ್ 13ನೇ ತಾರೀಖು ರಮೇಶ್ ಜಾರಕಿಹೊಳಿ ದೂರು ಕೊಡ್ತಾರೆ. ಅದಾಗಿ ಅರ್ಧಗಂಟೆಯಲ್ಲಿ ನನ್ನ ವಿಡಿಯೋ ರಿಲೀಸ್ ಮಾಡ್ತಾರೆ. ಇದನ್ನ ನೋಡಿದ್ರೆ ಎಸ್‌ಐಟಿ ಯಾರ ಪರವಾಗಿದೆ? ಯಾರನ್ನ ಸೇಫ್ ಮಾಡ್ತಿದ್ದಾರೆ? ಅಂತ ಗೊತ್ತಾಗ್ತಿಲ್ಲ.
ಸಿಡಿ ಸಂತ್ರಸ್ತ ಯುವತಿಯಿಂದ 2ನೇ ವೀಡಿಯೋ ಹೇಳಿಕೆ ರಿಲೀಸ್ : ಏನ್ ಹೇಳಿದ್ದಾರೆ ಗೊತ್ತಾ.? pic.twitter.com/kreDAJE0we
— Vasantha B Eshwaragere (@vasanthabeshwar) March 25, 2021
ನಾನು ಕಿಡ್ನಾಪ್ ಆಗಿದ್ದೇನೆ ಅಂತ ನನ್ನ ತಂದೆ, ತಾಯಿ ಸ್ವಇಚ್ಛೆಯಿಂದ ದೂರು ಕೊಡಲು ಸಾಧ್ಯವೇ ಇಲ್ಲ. ಯಾಕಂದ್ರೆ ನಾನು ತಪ್ಪು ಮಾಡಿಲ್ಲ ಅಂತ ತಂದೆ, ತಾಯಿಗೆ ಗೊತ್ತು ಅಂತ ವಿಡಿಯೋದಲ್ಲಿರುವ ಯುವತಿ ಹೇಳಿದ್ದಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ