ಸತೀಶ್ ಜಾರಕಿಹೊಳಿಯಿಂದ ಕಾಂಗ್ರೆಸ್ ಪಕ್ಷ ಹಾಳು!!?

ಬೆಳಗಾವಿ:

       ಸತೀಶ್ ಜಾರಕಿಹೊಳಿ ಅವರಂತವರು ಬಂದು ಪಕ್ಷ ಹಾಳಾಯಿತು ಎಂದು ರಮೇಶ್ ಜಾರಕಿಹೊಳಿ ಯವರು ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ.

      ನಗರದಲ್ಲಿ ಮಾತನಾಡಿದ ಅವರು, ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ನಾನು ಸಚಿವನಾಗಿ ಆರಾಮವಾಗಿದ್ದೆ. ಸತೀಶ್ ನಾನು ಮಂತ್ರಿಯಾಗಿದ್ದಕ್ಕೆ ಮನೆಗೆ ಬಂದು ಕಣ್ಣೀರು ಹಾಕಿದರು. ಕುಟುಂಬದ ರಾಜಕೀಯ ಭವಿಷ್ಯದ ದೃಷ್ಠಿಯಿಂದ ನನಗೆ ಭಿನ್ನಮತ ಮಾಡುವಂತೆ ಪ್ರಚೋದನೆ ಕೊಟ್ಟರು. ಈ ಮೂಲಕ ಪಕ್ಷದಲ್ಲಿ ಭಿನ್ನಮತ ಆರಂಭಕ್ಕೆ ಅವರೇ ಕಾರಣವಾದರು. ಸತೀಶ್ ಜಾರಕಿಹೊಳಿ ಅವರಂತವರು ಬಂದು ಪಕ್ಷ ಹಾಳಾಯಿತು. ಎಂದು ಆರೋಪಿಸಿದರು.

      ಸತೀಶ್​ ಜಾರಕಿಹೊಳಿ ಗೋಮುಖ ವ್ಯಾಘ್ರ ಇದ್ದಂತೆ. ನನಗೆ ಮೋಸ ಮಾಡಿ ಮಂತ್ರಿಯಾಗಿದ್ದಾರೆ, ಆಗಲಿ ಬಿಡಿ. ಮುಂದೆ ಇದಕ್ಕೆ ಸರಿಯಾದ ಉತ್ತರ ನೀಡುತ್ತೇನೆ ಎಂದು ಗುಡುಗಿದರು.

     ಅಲ್ಲದೇ ಇಂದೇ ಆಪ್ತರು ಹಾಗೂ ವಕೀಲರು ಹಾಗೂ ತನ್ನೊಂದಿಗೆ ಬಿಜೆಪಿ ಸೇರಲಿರುವ ಶಾಸಕರ‌ ಜೊತೆ ಚರ್ಚೆ ನಡೆಸಿ, ತೀರ್ಮಾನ ‌ಕೈಗೊಳ್ಳುತ್ತೇನೆ‌ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ