ಬೆಂಗಳೂರು
ಅಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಸೋಮವಾರ ಬೆಳಿಗ್ಗೆ ಎಚ್ಚರಗೊಂಡ ಕೋಡಲೇ ಜೈಲಿನ ಅಧಿಕಾರಿಗಳಿಂದ ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನದ ಸುದ್ದಿ ಕೇಳಿ ಪರಪ್ಪನ ಅಗ್ರಹಾರದಲ್ಲಿ ಅಘಾತಗೊಂಡರು.
ಕಳೆದ ನ.10 ರ ಸಂಜೆಯಿಂದ ಸುಮಾರು 23 ಗಂಟಗಳ ಕಾಲ ಸಿಸಿಬಿ ವಿಚಾರಣೆಯಿಂದ ಬಳಲಿದ್ದ ರಾತ್ರಿ ಬೇಗ ನಿದ್ದೆಗೆ ಜಾರಿ ಮುಂಜಾನೆ 6.30ರ ವೇಳೆಗೆ ಎದ್ದು ಬಿಸಿ ನೀರು ಸೇವಿಸಿ, ನಿತ್ಯ ಕರ್ಮಗಳನ್ನು ಮುಗಿಸಿ ಜೈಲು ಅಧಿಕಾರಿಗಳಿಂದ ಕೇಂದ್ರ ಸಚಿವ ಅನಂತ್ ಕುಮಾರ್‍ರವರ ನಿಧನದ ಸುದ್ದಿ ಕೇಳಿ ಆಘಾತಗೊಂಡು ನಾನು ಅತ್ಮೀಯ ಮಿತ್ರನನ್ನು ಕಳೆದುಕೊಂಡೆ ಎಂದು ಅಧಿಕಾರಿಗಳ ಮುಂದೆ ಮರುಗಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ದಿನಪತ್ರಿಕೆಗಳತ್ತ ಕಣ್ಣಾಯಿಸಿದ್ದಾರೆ. ವಿಶೇಷ ಭದ್ರತಾ ಕೊಠಡಿಯಲ್ಲಿ ರೆಡ್ಡಿಯನ್ನ ಇಡಲಾಗಿದ್ದು, ಮೌನದಲ್ಲೇ ಮೊದಲ ರಾತ್ರಿ ಕಳೆದ ಜನಾರ್ದನ ರೆಡ್ಡಿಗೆ 7 ಗಂಟೆ ಸುಮಾರಿಗೆ ಟೀ ಮತ್ತು ಪಲಾವ್ ನೀಡಲಾಗಿದೆ. ಟೀ ಮಾತ್ರ ಕುಡಿದು ಪಲಾವ್ ಬೇಡ ಎಂದು ಹೇಳಿದರು ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
