ಮೇಲ್ಛಾವಣಿ ಕುಸಿತ : ಕುಟುಂಬದ 6 ಮಂದಿ ದುರ್ಮರಣ!!!

ಬೀದರ್‌: 

      ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ ಭೀಕರ ದುರಂತ ಬಸವಕಲ್ಯಾಣದ ಚಿಲ್ಲಾಗಲ್ಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

     ನದೀಮ್‌ ಶೇಖ್‌ (45 ) ಫ‌ರಿದಾ ಬಾನು ,ಆಯಿಷಾ ಬಾನು (15 ),ಮೆಹಾತಾಬಿ(14), ಫೈಜಾನ್‌ ಅಲಿ (6), ಫ‌ರಾನ್‌ ಅಲಿ (4)  ಮೃತ ದುರ್ದೈವಿಗಳು.

      ಹಣ್ಣುಗಳನ್ನು ಮಾರಿ ಜೀವನ ಸಾಗಿಸುತ್ತಿದ್ದ ನದೀಮ್ ಶೇಖ್ ಅವರದ್ದು ಮಣ್ಣಿನ ಗೋಡೆಯಿಂದ ನಿರ್ಮಿತ ಮನೆಯಾಗಿತ್ತು.ನೂರು ವರ್ಷಕ್ಕೂ ಹಳೆಯದಾದ ಮನೆಯ ಗೋಡೆಗಳು ಮಳೆಯಿಂದಲಾಗಿ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಮಲಗಿದ್ದವರ ಮೇಲೆ ಛಾವಣಿ ಬಿದ್ದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

      ಪೊಲೀಸರ ಸಹಾಯದಿಂದ ಶವಗಳನ್ನು ಹೊರ ತೆಗೆಯಲಾಗಿದೆ. ಶಾಸಕ ಬಿ.ನಾರಾಯಣರಾವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಈ ಸಂಬಂಧ ಬಸವಕಲ್ಯಾಣ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap